ಬಿಗ್ ಬಾಸ್ ವಿನ್ನರ್ ಮನೆಗೆ ನುಗ್ಗಿ ಅರೆಸ್ಟ್ ಮಾಡಿದ ಪೊಲೀಸರು
ಹೈದರಾಬಾದ್ : ತೆಲುಗು ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಮನೆಗೆ ತೆರಳಿ ಅರೆಸ್ಟ್ ಮಾಡಿದ್ದಾರೆ. ಸಾರ್ವಜನಿಕರ ಶಾಂತಿ, ಸುವ್ಯವಸ್ಥೆಗೆ ದಕ್ಕೆ ತಂದ ಆರೋಪದ ಅಡಿಯಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7 ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 17 ರಂದು ಬಿಗ್ ಬಾಸ್ ಫೈನಲ್ ನಡೆದಾಗ ಪಲ್ಲವಿ ಪ್ರಶಾಂತ್ ಪ್ರಶಸ್ತಿ ಗೆದ್ದರು, ಅಮರ್ ದೀಪ್ ರನ್ನರ್ ಆದರು. ಅಂತಿಮ ಹಂತದ ನಂತರ ಪ್ರಶಾಂತ್ ಮತ್ತು ಅಮರ್ ಅನ್ನಪೂರ್ಣ ಸ್ಟುಡಿಯೋಸ್ ಹೊರಗೆ ಇಬ್ಬರ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಆ ವೇಳೆ ಇಬ್ಬರು ಅಭಿಮಾನಿಗಳ ನಡುವೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಕಾರಿನ ಗಾಜುಗಳನ್ನು ಒಡೆದಿದ್ದಾರೆ. ಕೆಲವು ಆರ್ಟಿಸಿ ಬಸ್ಗಳ ಕನ್ನಡಿ ಧ್ವಂಸಗೊಂಡಿದೆ.
ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಧ್ವಂಸ ಮಾಡಿದ ಹಾಗೂ ಪೊಲೀಸರ ಆದೇಶ ಪಾಲಿಸದ ಆರೋಪದ ಮೇಲೆ ಜುಬ್ಲಿ ಹಿಲ್ಸ್ ಪೊಲೀಸರು, ತೆಲಂಗಾಣದ ಗಜ್ವೇಲ್ ಮಂಡಲದ ಕೋಲುಗೂರ್ ಗ್ರಾಮಕ್ಕೆ ತೆರಳಿ ಪಲ್ಲವಿ ಪ್ರಶಾಂತ್ ಅವರನ್ನು ಅವರ ಮನೆಯಲ್ಲಿ ಬಂಧಿಸಿದ್ದಾರೆ.