ಬಿಜೆಪಿಗೆ ಹೋಗಲು ನನಗೇನು ಹುಚ್ಚಾ .!ಸವದಿ
ಬೆಂಗಳೂರು; ಜಗದೀಶ್ ಶೆಟ್ಟರ್ BJPಗೆ ಮರಳಿದ ಬೆನ್ನಲ್ಲೇ ತಾವು ಕೂಡ ಹೋಗಲಿದ್ದಾರೆ ಎನ್ನುವ ಸುದ್ದಿಗೆ ಲಕ್ಷ್ಮಣ್ ಸವದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ನಮ್ಮಪ್ಪನಿಗೆ ಹುಟ್ಟಿದ್ದು, ಮೈಯಲ್ಲಿ ಅಪ್ಪನ ರಕ್ತ ಹರಿಯುತ್ತಿದೆ. ಬೇರೆಯವರ DNA ತಗೊಂಡು ನಾನೇನು ಮಾಡ್ಲಿ.!
ಶೆಟ್ಟರ್ ವಾಪಸ್ ಹೋಗಿದ್ದಾರಂದ್ರೆ ನಾನ್ಯಾಕೆ BJPಗೆ ಹೋಗಲಿ. ಕಾಂಗ್ರೆಸ್ ನಲ್ಲಿ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಮತ್ತೆ ಆ ಕಡೆ ಹೋಗಲು ನನಗೇನು ಹುಚ್ಚಾ? ಎಂದು ಪ್ರಶ್ನಿಸಿದ್ದಾರೆ.!