Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್‌ ಸರ್ಕಾರವೇ ಇರಲಿಯೆಂದು ಬಯಸುತ್ತಿದ್ದಾರೆ’- ಜಾರಕಿಹೊಳಿ

ಬೆಂಗಳೂರು: ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್‌ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ. ಅಂತವರ ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಬಿಜೆಪಿಗೆ 40 ಜನ ಸೇರುತ್ತಾರೆ ಎನ್ನುವ ಬಿ.ಎಲ್‌ ಸಂತೋಷ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲೇ ಬಿ.ಎಲ್‌ ಸಂತೋಷ್‌ ವಿರುದ್ಧ ಮಾತನಾಡುತ್ತಿದ್ದಾರೆ. ಬಿ.ಎಲ್‌ ಸಂತೋಷ್‌ ಅವರು ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು. 40 ಜನರನ್ನ ತೆಗೆದುಕೊಂಡು ಏನು ಮಾಡ್ತಾರೆ ಅಂತಾ ಪ್ರಶ್ನಿಸಿದ್ದಾರೆ.

ಸರ್ಕಾರ ಬೀಳುತ್ತೆ ಅಂತ 5 ವರ್ಷದ ವರೆಗೂ ಈ ಮಾತು ಇದ್ದೇ ಇರುತ್ತದೆ. ಆದರೆ ಆ ಕಾರ್ಯ ಸಫಲ ಆಗೋದಿಲ್ಲ. ಪ್ರಯತ್ನ ಅಂತೂ ಅವರದ್ದು ಇದ್ದೇ ಇರುತ್ತದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಭಾಗದಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಇದ್ದರೆ ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡ್ತಾರೆ. ಯಾರೇ ಬಂದರೂ ಸ್ವಾಗತ ಮಾಡ್ತೀವಿ ಎಂದರು.