Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿ ಜೊತೆ ಕೈಜೋಡಿಸುವ ತಪ್ಪನ್ನು ಶರದ್ ಪವಾರ್ ಮಾಡಲ್ಲ ಎಂದ ಸಂಜಯ್ ರಾವುತ್

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತಮ್ಮ ಸೋದರಳಿಯ ಅಜಿತ್ ಪವಾರ್ ಮಾಡಿದಂಥ ಕೆಲಸ ಮಾಡೋದಿಲ್ಲ. ಶರದ್ ಪವಾರ್ ಎಂದಿಗೂ ಬಿಜೆಪಿ ಜೊತೆ ಕೈಜೋಡಿಸೋದಿಲ್ಲ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತಬಾಡಿದ ಅವರು, ಮತ್ತೊಮ್ಮೆ ಬಣ ರಾಜಕೀಯವನ್ನು ಖಂಡಿಸಿದ್ದಾರೆ. ಅಜಿತ್ ಪವಾರ್ ಸ್ವಂತ ರಾಜಕೀಯ ಪಕ್ಷ ಕಟ್ಟಿಕೊಂಡು ಚುನಾವಣೆಗೆ ಸ್ಪರ್ಧಿಸಿದರೆ ನಿಜಕ್ಕೂ ದೊಡ್ಡ ನಾಯಕನಾಗಿ ಬೆಳೆಯಬಹುದು. ಏಕನಾಥ್ ಶಿಂಧೆ ಮಾಡಿದಂತೆಯೇ, ಬಿಜೆಪಿಯ ನೆರವಿನಿಂದ ಇವರು ರಾಜಕಾರಣ ಮಾಡಿದರೆ ಅವರ ಭವಿಷ್ಯ ಮರಳು ಕೋಟೆಯಂತೆ ಕುಸಿದು ಹೋಗುತ್ತದೆ ಎಂದರು.