‘ಬಿಜೆಪಿ ನಾಯಕರು ಬಾಲಿವುಡ್ ಹೀರೋಗಳು’ – ರಾಹುಲ್ ಗಾಂಧಿ ವ್ಯಂಗ್ಯ
ಹೈದರಾಬಾದ್: ಪಂಚರಾಜ್ಯ ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕೀಯ ನಾಯಕರಲ್ಲಿನ ಕಿತ್ತಾಟ ಹೆಚ್ಚಾಗಿದ್ದು, ಈ ನಡುವೆ ಬಿಜೆಪಿ ನಾಯಕರು ಬಾಲಿವುಡ್ ಹೀರೋಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಜಟಾಪಟಿ ಇರುವುದು ಕಾಂಗ್ರೆಸ್ ಮತ್ತು ಬಿಆರ್‌ಎಸ್‌ಗೆ ಆದರೆ ಬಿಜೆಪಿಗರು ಬಾಲಿವುಡ್ ಹೀರೋಗಳಂತೆ ಓಡಾಡುತ್ತಿದ್ದರು. ಅವರ ಗಾಡಿಯ ನಾಲ್ಕೂ ಚಕ್ರ ಕಳಚಿರುವುದು ಅವರಿಗೆ ಗೊತ್ತೇ ಆಗಲಿಲ್ಲ. ಈಗ ಕಾಂಗ್ರೆಸ್‌ಗೆ ಸೇರಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ! ಆದರೆ ನಮಗೆ ಅವರುಗಳು ಬೇಕಿಲ್ಲ’ ಎಂದರು.
ಇನ್ನು ಛತ್ತೀಸ್‌ಗಢದ ಬಿಜಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಸಚಿವ ಅನುರಾಗ್, ಛತ್ತೀಸ್‌ಗಢದ ಜನತೆ ಯು ಸಿಎಂ ಬಘೇಲ್ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಸರಕಾರ ಎಂದರೆ ಅದು ಕೇವಲ ಹಗರಣ ಮತ್ತು ಮಾಫಿಯಾ ಎಂದಿದ್ದಾರೆ.