ಬಿಜೆಪಿ ಮುಳುಗಿರುವ ಹಡಗು.! ಪ್ರಿಯಾಂಕ್ ಖರ್ಗೆ
ಮಂಗಳೂರು: ಬಿಜೆಪಿ ಮುಳುಗಿರುವ ಹಡಗು. ಅಲ್ಲಿ ನಾಲ್ಕೈದು ಜನರು ಟ್ಯೂಬ್ ಹಾಕ್ಕೊಂಡು ತಿರುಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಮನೆ ಖಾಲಿಯಾಗುತ್ತದೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ, ಇನ್ನು ಆ ಪಕ್ಷದಲ್ಲಿರುವವರಿಗೆ ರಕ್ಷಣೆ ಕೊಡುವವರು ಯಾರು ಎಂದು ಸಚಿವರು ಹೇಳಿದರು.