ಬಿಹಾರದಲ್ಲಿ ರೈಲು ಅಪಘಾತ – ನಾಲ್ಕು ಮಂದಿ ಮೃತ್ಯು, ಅನೇಕರಿಗೆ ಗಾಯ
ಬಕ್ಸಾರ್: ಬಿಹಾರದ ಬಕ್ಸಾರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ದಿಲ್ಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ನ ಕೆಲವು ಬೊಗಿಗಳು ಹಳಿತಪ್ಪಿದ್ದು, ನಾಲ್ವರು ಮೃತಪಟ್ಟು ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಅವಘಡದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, 21 ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಿದೆ.
23 ಬೋಗಿಗಳನ್ನು ಹೊಂದಿದ್ದ ಈಶಾನ್ಯ ಎಕ್ಸ್‌ಪ್ರೆಸ್ ದಿಲ್ಲಿಯ ಆನಂದ ವಿಹಾರ ನಿಲ್ದಾಣದಿಂದ ಅಸ್ಸಾಮಿನ ಕಾಮಾಖ್ಯಕ್ಕೆ ಸುಮಾರು 33 ಗಂಟೆಗಳ ಪ್ರಯಾಣವನ್ನು ಆರಂಭಿಸಿದ್ದು, ಅಪಘಾತ ಸಂಭವಿಸಿದ ತಕ್ಷಣ ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದರು.