Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಹಾರದಲ್ಲಿ 22 ಮಂದಿ ನೀರಿನಲ್ಲಿ ಮುಳುಗಿ ಸಾವು

ಪಟನಾ: ತಮ್ಮ ಮಕ್ಕಳ ಒಳಿತಿಗಾಗಿ ವ್ರತ ಮಾಡುವಂಥ ಜೀವಿತ ಪುತ್ರಿಕ ಹಬ್ಬದ ಹಿನ್ನೆಲೆಯಲ್ಲಿ ನದಿಗಳಿಗೆ, ಹಳ್ಳಕೊಳ್ಳಗಳಿಗೆ ಸ್ನಾನ ಮಾಡಲು ತೆರಳಿದ್ದ 22 ಮಂದಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ.

ರಾಜ್ಯದ ವಿವಿಧೆಡೆ ಪ್ರತ್ಯೇಕ ಘಟನೆಗಳಲ್ಲಿ ಈ ಸಾವುಗಳು ಸಂಭವಿಸಿದ್ದು, ಅವರಲ್ಲಿ ಬಹುತೇಕರು ಹಬ್ಬದ ಹಿನ್ನೆಲೆಯಲ್ಲಿ ನದಿಗಳಿಗೆ ಸ್ನಾನಕ್ಕೆಂದು ತೆರಳಿದ್ದವರೇ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಭೋಜಪುರದಲ್ಲಿ 5 ಮಂದಿ ನೀರಿನಲ್ಲಿ ಮುಳುಗಿ ಸತ್ತಿದ್ದರೆ, ಜೆಹನ್‌ಬಾದ್‌ನಲ್ಲಿ 4 ಮಂದಿ, ಪಾಟ್ನಾ ಮತ್ತು ರೋಹತ್ಸ್ನಲ್ಲಿ ತಲಾ ಮೂವರು, ದರ್ಭಾಂಗ ಹಾಗೂ ನವಾದದಲ್ಲಿ ತಲಾ ಇಬ್ಬರು ಮತ್ತು ಕೈಮೂರ್‌, ಮೇಧಪುರ್‌, ಔರಂಗಾಬಾದ್‌ನಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ. ಮೃತರ ಸಾವಿಗೆ ಸಿಎಂ ನಿತೀಶ್‌ ಕುಮಾರ್‌ ಸಂತಾಪ ಸೂಚಿಸಿ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.