Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿ.ಸಿ.ಎ ಪದವಿಯಲ್ಲಿ ಬಿಟ್ಸ್ ಹೈಟೆಕ್ ಕಾಲೇಜಿನ ವಿದ್ಯಾರ್ಥಿನಿಯರು ರ್ಯಾಂಕ್

 

ಚಿತ್ರದುರ್ಗ : ಬಿಟ್ಸ್ ಹೈಟೆಕ್ ಕಾಲೇಜಿನ ವಿದ್ಯಾರ್ಥಿನಿಯರಾದ ಹರ್ಷಿತ ಎಸ್ ಹಾಗೂ ತಹಸೀನಾಬಾನು ಇವರುಗಳು 2022-23ನೇ ಸಾಲಿನ ಬಿ.ಸಿ.ಎ ಪದವಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲದಿಂದ ಹರ್ಷಿತ ಎಸ್ ಏಳನೇ ರ್ಯಾಂಕ್ ಮತ್ತು ತಹಸೀನಾಬಾನು ಒಂಬತ್ತನೇ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಇವರನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಕವಿತ ಜಿ.ಎಂ, ಸಂಸ್ಥಾಪಕರಾದ ರವೀಂದ್ರ ಕೆ.ಬಿ ಹಾಗೂ ಬೋಧಕ ವೃಂದದವರು ತುಂಬು ಹೃದಯದಿಂದ ಅಭಿನಂದಿಸಿರುತ್ತಾರೆ. ಬಿಟ್ಸ್ ಹೈಟೆಕ್ ಕಾಲೇಜು ಪ್ರಾರಂಭದಿಂದಲೂ ಪ್ರತಿ ವರ್ಷ ಪ್ರಥಮ ಹಾಗೂ ನಂತರದ ರ್ಯಾಂಕ್‌ಗಳನ್ನು ಪಡೆಯುತ್ತಿದ್ದು ಕಾಲೇಜಿನ ಈ ಸಾಧನೆಯು ಅದ್ವಿತೀಯ ಹಾಗೂ ಪ್ರಶಂಸನಾರ್ಹವಾಗಿದೆ.