Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೀದರ್ – ಪುಟ್ಟ ಮಗುವಿನ ಪ್ರಾಣ ತೆಗೆದ ಕಾರು ಚಾಲಕ – ಸಿಸಿಟಿವಿ ವಿಡಿಯೋ

ಬೀದರ್ : ಒಂದುವರೆ ವರ್ಷದ ಮಗುವಿನ ಮೇಲೆ ಕಾರೊಂದು ಪರಿಣಾಮ ಮಗು ಸ್ಥಳದಲ್ಲೇ ಸಾವನಪ್ಪಿ ಘಟನೆ ಬೀದರ್ ಜಿಲ್ಲೆ. ಹಾರೂರಗೇರಿ ಸಮೀಪದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರು ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತ ಮಗುವನ್ನು ಬಸವಚೇತನ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಆಸ್ಪತ್ರೆ ಎದುರು ಮಗು ಆಟವಾಡುತ್ತಿತ್ತು. ಇನ್ನೊವಾ ಕಾರಿನ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸಿದ್ದಾನೆ. ಮಗುವಿನ ತಲೆಯ ಮೇಲೆ ಕಾರು ಹರಿದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಕಾರಿನ ಚಾಲಕ ದಂತ ವೈದ್ಯನಾಗಿದ್ದಾನೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ. ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.