ಬೆಂಕಿ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ – 60 ಟ್ಯಾಂಕರ್‌ಗಳು ಸುಟ್ಟು ಭಸ್ಮ
ಅಹಮದಾಬಾದ್: ಗುಜರಾತ್‌ನ ಅರ್ವಾಲಿ ಜಿಲ್ಲೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬುಧವಾರ ಮುಂಜಾನೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ರಾಸಾಯನಿಕಗಳಿಂದ ತುಂಬಿದ್ದ 60 ಟ್ಯಾಂಕರ್‌ಗಳು ಸುಟ್ಟು ಭಸ್ಮವಾಗಿವೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭಾರಿ ಪ್ರಮಾಣದ ಬೆಂಕಿ, ಹೊಗೆ ಆವರಿಸಿದ್ದನ್ನು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸುಮಾರು 10 ಅಗ್ನಿಶಾಮಕ ದಳಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಇನ್ನು ಈ ದುರ್ಘಟನೆಯಲ್ಲಿ ಸುಮಾರು 60 ಟ್ಯಾಂಕರ್‌ಗಳು ಸುಟ್ಟು ಭಸ್ಮವಾಗಿವೆ.