ಬೆಂಗಳೂರು: ಕಬ್ಬನ್ ಪಾರ್ಕ್ನಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅವಕಾಶ
ಬೆಂಗಳೂರು: ಬೆಂಗಳೂರು ನಗರದ ಶ್ವಾಸಕೋಶ ಎಂದೇ ಹೆಸರುವಾಸಿ ಆಗಿರುವ ಹಾಗೂ ನಗರದ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕಿನಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ವಾಹನ ಸಂಚಾರಕ್ಕೆ ಹೇರಿದ ನಿರ್ಬಂಧವನ್ನು ತೆರವುಗೊಳಿಸಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಕಬ್ಬನ್ ಪಾರ್ಕಿನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವನ್ನು ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ನೀಡಿದೆ. ಈ ಇಂದೆ ಕಬ್ಬನ್ ಪಾರ್ಕಿನಲ್ಲಿ ಪ್ರಾಶಾಂತ ವಾತಾವರಣಕ್ಕೆ ಯಾವುದೇ ಧಕ್ಕೆ ಆಗದಿರಲೆಂದು, ವಾಕಿಂಗ್, ವ್ಯಾಯಾಮ ಮಾಡಲು ಬರುವವರಿಗೆ ಅನುಕೂಲವಾಗಲೆಂದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಈ ನಿರ್ಬಂಧವನ್ನು ಸದಿಲಿಸಿರುವುದು ಪ್ರಕೃತಿ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ ಹಾಗೂ ನಿರಾಶೆ ಉಂಟುಮಾಡಿದೆ.