ಬೆಂಗಳೂರು: ಕಿಲ್ಲರ್ ಬಿಎಂಟಿಸಿಗೆ ಮೂರು ವರ್ಷದ ಮಗು ಬಲಿ
ಬೆಂಗಳೂರು: ಬಿಎಂಟಿಸಿ ಬಸ್‌ಗೆ ಮೂರು ವರ್ಷದ ಮಗು ಬಲಿಯಾದ ಘನಟೆ ನಗರದ ಗಾರೆ ಭಾವಿಪಾಳ್ಯದಲ್ಲಿ ನಡೆದಿದೆ. ಆಯಾನ್ ಪಾಷಾ ಮೃತ ಮಗುವಾಗಿದ್ದು, ಗಾರೇಪಾಳ್ಯ ಜಂಕ್ಷನಲ್ಲಿ ನಿನ್ನೆ ಸಂಜೆ ನಡೆದಿರೋ ಘಟನೆ ಇದಾಗಿದೆ. ದೊಡ್ಡಮ್ಮನ ಜೊತೆಗಿದ್ದ ಮಗುವನ್ನ ಕರೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ, ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗೆ ಬಿದ್ದಿದೆ. ಮಗು ಕೆಳಗೆ ಬೀಳುತ್ತಿದ್ದಂತೆ ಬಸ್ ಚಕ್ರ ಮಗುವಿನ ಮೇಲೆ ಹತ್ತಿದೆ. ಪರಿಣಾಮ ಮೂರು ವರ್ಷದ ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಬಸ್ ಹಾಗೂ ಚಾಲಕರನ್ನ ಪೊಲೀಸರು ವಶಕ್ಕೆ ನಡೆಸಿದ್ದಾರೆ.