Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಂಗಳೂರು : ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯೊಬ್ಬ ಅರೆಸ್ಟ್ – ಹುಲಿ ಉಗುರು ಧರಿಸಿದ್ದಕ್ಕೆ ವಶಕ್ಕೆ

ಬೆಂಗಳೂರು : ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯೊಬ್ಬ ಅರೆಸ್ಟ್​ ಆಗಿದ್ದಾನೆ. ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಸ್ಫರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದಾರೆ. ನಿನ್ನೆ ರಾತ್ರಿ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳ ಕಷ್ಟಡಿಯಲ್ಲಿರುವ ವರ್ತೂರು ಸಂತೋಷ್ ನ ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ. ವೈಲ್ಡ್​ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದೆ. ಕುತ್ತಿಗೆಯಲ್ಲಿ ಹುಲಿ ಉಗುರು ಇರುವ ಪೆಂಡೆಂಟ್ ಹಾಕಿಕೊಂಡಿದ್ದರು. ಈ ಕುರಿತು ವ್ಯಕ್ತಿಯೊಬ್ಬರು ದೂರು ನೀಡಿದ್ರು. ವರ್ತೂರು ಸಂತೋಷ್‌ನನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ್ದು ಸಂತೋಷ್ ಧರಿಸಿದ್ದ ಪೆಂಡೆಂಟ್ ಸೀಜ್ ಮಾಡಿಕೊಂಡಿದ್ದಾರೆ ಮೇಲ್ನೋಟಕ್ಕೆ ಪೆಂಡೆಂಟ್ ನಲ್ಲಿ ಬಳಸಿರುವ ವಸ್ತು ಹುಲಿ ಉಗುರು ಎಂಬುದು ಸಾಭೀತಾಗಿದೆ.