Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬೆಂಗಳೂರು: ಲವರ್ಸ್ ಕಾಟಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಟೆಕ್ಕಿ

ಬೆಂಗಳೂರು: ಹಳೇ ಲವರ್ ಬಿಟ್ಟು ಹೋದಮೇಲೆ ಹೊಸ ಲವರ್ ಜೊತೆ ಸುತ್ತಾಡುತ್ತಿರುವುದನ್ನು ಕಂಡು ಹಳೇ ಫೋಟೋ ವೈರಲ್ ಮಾಡುತ್ತೇನೆ ಅಂತ ಬ್ಲಾಕ್ ಮಾಡಿದ್ಳಂತೆ. ಈ ಟಾರ್ಚರ್‌ಗೆ ಟೆಕ್ಕಿ ವಿಷ ಸೇವಿಸಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾನೆ. ಮೃತನ ಸಾವಿಗೆ ಹಳೇ ಲವ್ವರ್ ಹಾಗೂ ಹೊಸ ಲವ್ವರ್ ಇಬ್ಬರೂ ಕಾರಣವೆಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಪ್ರತಿಷ್ಟಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ ಅದೇ ಕಂಪನಿಯ ಯುವತಿಯನ್ನು ಪ್ರೀತಿಸ್ತಿದ್ದ. ಇಬ್ಬರು ನಾಲ್ಕು ವರ್ಷಗಳಿಂದ ಲವ್ ಮಾಡಿ ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಬ್ರೇಕ್ ಅಪ್ ಆಗಿತ್ತು‌. ಬ್ರೇಕಪ್‌ನ ನಂತರ ಅದೇ ಕಂಪನಿಯ ಮತ್ತೊಬ್ಬ ಯುವತಿಯ ಜೊತೆ ಸಂತೋಷ್‌ಗೆ ಲವ್ ಆಗಿದೆ. ಇದೇ ವಿಚಾರಕ್ಕೆ ಸಂತೋಷ್‌ಗೆ ಹಳೇ ಲವರ್ ಕಪಾಳಮೋಕ್ಷ ‌ಮಾಡಿ ಮೊದಲು ನನ್ನ ಜೊತೆಯಲ್ಲಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಹಳೇ ಲವರ್ ಧಮ್ಕಿ ಹಾಕಿದ್ಳಂತೆ. ನಂತರ ಎರಡು ಕುಟುಂಬದವರು ಕೂತು ಮಾತಾಡಿ ಒಪ್ಪಿದ ಮೇಲೆ ನಿನಗೂ ಸಂತೋಷ್ ಮದುವೆ ಮಾಡುತ್ತೇವೆ ಎಂದಿದ್ದ ಸಂತೋಷ ಕುಟುಂಬಸ್ಥರು ಮನವೊಲಿಸಿದ್ದಾರೆ. ಈ ವೇಳೆ ಮೊದಲ ಲವ್ವರ್‌ಗೆ ಕಂಪನಿಯಿಂದ ಬೇರೆಡೆಗೆ ಟ್ರಾನ್ಸ್‌ಫರ್ ಆಗಿದ್ದು, ಈ ಟ್ರಾನ್ಸ್ಫರ್‌ಗೆ ಸಂತೋಷ್ ಹಾಗೂ ಆತನ ಹೊಸ ಗೆಳತಿ ಕಾರಣ ಎಂದುಕೊಂಡ ಹಳೇ ಲವ್ವರ್ ಮತ್ತೆ ಸಂತೋಷ್‌ಗೆ ಬೈದಿದ್ಳಂತೆ. ಇದರಿಂದ ನೊಂದು ಲವ್ವರ್ಸ್ ಕಾಟಕ್ಕೆ ಬೇಸತ್ತು ಸಂತೋಷ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಮೃತನ ಕುಟುಂಬಸ್ಥರ ದೂರಿನನ್ವಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಅಡಿ ದೂರು ದಾಖಲಾಗಿದ್ದು ಕೇಸ್ ನಲ್ಲಿ ಹಳೇ ಲವ್ವರ್ A1 ಆರೋಪಿಯಾದ್ರೆ ಹೊಸ ಲವ್ವರ್ A2 ಆರೋಪಿಯಾಗಿದ್ದಾಳೆ.