ಬೈಕ್ನಲ್ಲೇ ವಿಮಾನ ನಿಲ್ದಾಣಕ್ಕೆ ತೆರಳಿದ ಹರಿಯಾಣ ಸಿಎಂ – ವಿಡಿಯೋ ವೈರಲ್
![](https://suddimane.com/wp-content/uploads/2023/09/WhatsApp-Image-2023-09-27-at-9.04.04-AM.jpeg)
ಕರ್ನಾಲ್: ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ವಿಮಾನ ನಿಲ್ದಾಣಕ್ಕೆ ಇಂದು ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಪ್ರಯಾಣಿಸಿದ್ದು, ವಿಡಿಯೋ ವೈರಲ್ ಆಗಿದೆ.
ಕಾರ್ ಫ್ರೀ ಡೇ ಎಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಇತ್ತೀಚೆಗೆ ಘೋಷಿಸಿದ್ದರು. ಅದರ ಅನ್ವಯ ಪ್ರತಿ ಮಂಗಳವಾರದಂದು ಕಾರುಗಳನ್ನು ಬಳಸದಂತೆ ಕರ್ನಾಲ್ನಲ್ಲಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ ಬೈಕ್ನಲ್ಲಿ ಪ್ರಯಾಣಿಸಿದ್ದಾರೆ.
ಇನ್ನು ಲಾಲ್ ಖಟ್ಟರ್ ಅವರು ಪ್ರಯಾಣಿಸುತ್ತಿದ್ದುದನ್ನು ನೋಡಿದ ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದು, ಮುಖ್ಯಮಂತ್ರಿಯನ್ನು ಹಿಂಬಾಲಿಸಿ ಪೊಲೀಸರು ಹಾಗೂ ಅಧಿಕಾರಿಗಳು ಸಹ ಬೈಕ್ಗಳಲ್ಲಿ ಬಂದರು ಎನ್ನಲಾಗಿದೆ.