ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕಚ್ಚಿ ವಿದ್ಯಾರ್ಥಿ ಮೃತ್ಯು
ಆಂದ್ರ: ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕಚ್ಚಿ ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.
9ನೇ ತರಗತಿಯ ರವಿಕಿರಣ ಮೃತ ವಿದ್ಯಾರ್ಥಿ. ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ವಿದ್ಯಾರ್ಥಿ ಕೈಹಾಕಿದ್ದು ಈ ವೇಳೆ ಚೇಳೊಂದು ಕೈಗೆ ಕುಟುಕಿದ್ದು, ತಕ್ಷಣ ರವಿಕಿರಣ ಚೀರಾಡಿದ್ದಾನೆ. ತಕ್ಷಣ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ರವಿಕಿರಣನ ಪರಿಸ್ಥಿತಿ ವಿಷಮಿಸಿ ಚೇಳಿನ ವಿಷ ಅವನ ಮೈಯೊಳಗೆ ಇಳಿಯುತ್ತಾ ಸಾಗಿ ಚಿಕಿತ್ಸೆ ಪಡೆಯುತ್ತಿದ್ದ ರವಿಕಿರಣ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾರ್ಕಾಪುರದ ರೂರಲ್ ಎಸ್ಸೈ ವೆಂಕಟೇಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.