ಬ್ರೇಕಿಂಗ್ ಮುರುಘಾ ಶರಣರು ಜೈಲಿನಿಂದ ರಿಲೀಸ್.!
ಚಿತ್ರದುರ್ಗ; ಪೋಕ್ಸ್ ಪ್ರಕರಣದಲ್ಲಿ ಜಾಮೀನು ದೊರೆತ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಶ್ರೀಗಳು ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ರಿಲೀಸ್ ಮಾಡಲು 2ನೇ ಹೆಚ್ಚುವರಿ ಜಿಲ್ಲಾ ಹಾಗು ಸೆಷನ್ಸ್ ನ್ಯಾಯಾಲಯ ನಿನ್ನೆ ಆದೇಶಿಸಿತ್ತು. ಆದೇಶ ಪ್ರತಿ ಕಾರಾಗೃಹ ತಲುಪುವುದು ವಿಳಂಬವಾಗಿದ್ದರಿಂದ ಬಿಡುಗಡೆಯಾಗಿರಲಿಲ್ಲ.
ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶ್ರೀಗಳ ವಿರುದ್ಧ ಪೋಕ್ಸ್ ಕೇಸ್ ದಾಖಲಾಗಿತ್ತು.