Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಗವಾನ್ ಬುದ್ದ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿಗೆ ನಿವೃತ್ತ ಪಿ.ಎಸ್.ಐ. ಪಿ.ನಾಗರಾಜ್ ಆಯ್ಕೆ.!

 

ಚಿತ್ರದುರ್ಗ: ಚಿತ್ರದುರ್ಗ ನಗರದ ನಿವೃತ್ತ ಪಿ.ಎಸ್.ಐ. ಪಿ.ನಾಗರಾಜ್ ರವರಿಗೆ ಭರತ್ಯ ದಲ್ ಸತ್ಯ ಆಕಾಡೆಮಿಯವತಿಯಿಂದ 2023ರ ವರ್ಷದ ಭಗವಾನ್ ಬುದ್ದ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ನಿವೃತ್ತ ಪೋಲಿಸ್ ನೌಕರರ ಸಂಘದ ಆಧ್ಯಕ್ಷರಾದ ಭೀಮಾರೆಡ್ಡಿ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,  ಕರೋನ ಸಮಯದಲ್ಲಿ ಫ್ರಂಟ್ ವಾರಿಯಸ್ಸ್ ಆಗಿ ಕೆಲಸ ಮಾಡಿದ್ಧಾರೆ, ಕರೋನ ಬಂದವರಿಗೆ ಚಿಕಿತ್ಸೆಗೆ ಕರೆÀದುಕೊಂಡು ಹೋಗುವುದು, ಔಷಧಿಯನ್ನು ನೀಡುವುದು ಆಹಾರವನ್ನು ಕೂಡುವುದು, ಕರೋನದಿಂದ ವೃತಪಟ್ಟವರ ಅಂತ್ಯಕ್ರಿಯೆಯನ್ನು ಅವರ ಜಾತಿ ಧರ್ಮಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆಯನ್ನು ಮಾಡಿದ್ಧಾರೆ. ಇವರು ಸೇವೆಯಿಂದ ನಿವೃತ್ತಿಯಾದ ನಂತರೂ ಸಹಾ ಸುಮ್ಮನಿರದೆ ನಮ್ಮ ನಿವೃತ್ತ ಪೋಲಿಸ್ ನೌಕರರ ಸಂಘದಲ್ಲಿ ಸದಸ್ಯರಾಗುವುದರ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಎಂದರು.

ನಾಗರಾಜ್ ರವರು ವಿವಿಧ ಸಂಘಗಳಿಗೆ ಸದಸ್ಯರಾಗುವುದರ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾರೆ. ಕೆಲಸದ ಸಮಯದಲ್ಲಿಯೂ ಸಹಾ ಉತ್ತಮವಾಗಿ ಕೆಲಸವನ್ನು ಮಾಡುವುದರ ಮೂಲಕ ಒಳ್ಳೆಯ ಹೆಸರನ್ನು ಪಡೆದಿದ್ದರು. ಆ ಸಮಯದಲ್ಲಿ ಜಿಲ್ಲಾಡಳಿತ, ಕರ್ನಾಟಕ ಸರ್ಕಾರದವತಿಯಿಂದ ಇವರ ಸೇವೆಯನ್ನು ಗುರುತಿಸಿ ಸನ್ಮಾನವನ್ನು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನವದೆಹಲಿಯ ಭರತ್ಯ ದಲ್ ಸತ್ಯ ಆಕಾಡೆಮಿಯವತಿಯಿಂದ 2023ರ ವರ್ಷದ ಭಗವಾನ್ ಬುದ್ದ ನ್ಯಾಷನಲ್ ಫೆಲೋಷಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.10 ಮತ್ತು 11 ರಂದು ನಡೆಯುವ ನ್ಯಾಷನಲ್ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿಗಳು ಪ್ರಧಾನ ಮಾಡಲಿದ್ದಾರೆ ಎಂದರು.

ಗೋಷ್ಟಿಯಲ್ಲಿ ಉಪಸ್ಥಿತರಿದ್ದ ನಿವೃತ್ತ ಪಿ.ಎಸ್.ಐ. ಪಿ.ನಾಗರಾಜ್ ಮಾತನಾಡಿ ನನಗೆ ಈ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ. ನನ್ನ ಕಾರ್ಯವನ್ನು ಮೆಚ್ಚಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಮಂದಿನ ದಿನಮಾನದಲ್ಲಿಯೂ ಸಹಾ ಸಮಾಜ ಸೇವೆಯನ್ನು ಮಾಡುವುದರ ಮೂಲಕ ನನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತೇನೆ ಎಂದರು.

ಗೋಷ್ಟಿಯಲ್ಲಿ ಹನುಂತಪ್ಪ, ರಾಜಪ್ಪ, ಯೂಸೆಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.