ಭದ್ರಾ ಕಾಲುವೆ ಪ್ರದೇಶದಲ್ಲಿ ಈ ಕಾರಣಕ್ಕೆ ನಿಷೇಧಾಜ್ಞೆ ಜಾರಿ .!
ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡಲಾಗಿದ್ದು ಕೊನೆ ಹಂತದ ರೈತರಿಗೆ ನೀರು ತಲುಪಿಸಲು ಅನಧಿಕೃತ ಪಂಪ್‍ಸೆಟ್ ತೆರವು ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಚ್ 28 ಮಧ್ಯಾಹ್ನ 2 ಗಂಟೆಯವರೆಗೆ ಮಾಯಾಕೊಂಡ ಹೋಬಳಿ ನಲ್ಕುಂದ ಬಳಿ ತಾಲ್ಲೂಕು ಗಡಿಯಿಂದ ಕುರ್ಕಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಭದ್ರಾ ಕಾಲುವೆಗಳ ಸುತ್ತಮುತ್ತ ಬಲ ಮತ್ತು ಎಡಬಾಗದಿಂದ 200 ಮೀ ರವರೆಗಿನÀ ಪ್ರದೇಶದ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿ ಡಾ.ಅಶ್ವಥ್.ಎಂ.ಬಿ ಆದೇಶಿಸಿರುತ್ತಾರೆ.
ಈ ಅವಧಿಯಲ್ಲಿ ಮಾರಕಾಸ್ತ್ರ, ಆಯುಧಗಳನ್ನು ತೆಗೆದುಕೊಂಡು ಹೋಗುವುದು, ಗುಂಪು ಸೇರುವುದು ಮಾಡುವಂತಿಲ್ಲ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.