Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನ ತಂಡ -World Cup Cricket 2023

ಈ ಬಾರಿಯ ಏಕದಿನ ವಿಶ್ವಕಪ್ ಕ್ರಿಕೆಟ್ ಗೆ ಕ್ಷಣಗಣನೆ ಆರಂಭವಾಗಿದ್ದು, ವೀಸಾ ಗೊಂದಲ ಮುಗಿಯುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ನಿನ್ನೆ (ಸೆಪ್ಟೆಂಬರ್ 27, ಬುಧವಾರ) ಹೈದರಾಬಾದ್‌ಗೆ ಆಗಮಿಸಿದೆ. 2023ರ ವಿಶ್ವಕಪ್‌ನಲ್ಲಿ (ICC ODI World Cup 2023) ಪಾಕ್ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಆಡಲಿದೆ. ಹೀಗಾಗಿ ನೇರವಾಗಿ ಹೈದರಾಬಾದ್‌ಗೆ ಬಂದಿಳಿದಿದೆ.

ಪಾಕಿಸ್ತಾನ ತಂಡ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನಾಳೆ (ಸೆಪ್ಟೆಂಬರ್ 29, ಶುಕ್ರವಾರ) ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಹೈದರಾಬಾದ್‌ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಬಾರಿ 2016ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿತ್ತು. ಒಂದು ದಶಕದಿಂದ ಟೀಂ ಇಂಡಿಯಾ ಜೊತೆಗೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ಪಾಕ್ ತಂಡ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು 7 ವರ್ಷಗಳ ಬಳಿಕ ಆಗಮಿಸಿರುವುದು ವಿಶೇಷ.

ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದೆ. ಹಲವು ದಿನಗಳಿಂದ ಭಾರತೀಯ ವೀಸಾಗಾಗಿ ಕಾಯುತ್ತಿದ್ದ ಈ ತಂಡಕ್ಕೆ ಸೋಮವಾರ (ಸೆಪ್ಟೆಂಬರ್ 25) ರಾತ್ರಿ ವೀಸಾ ಕೈಸೇರಿತ್ತು. ಆ ಬಳಿಕ ಪಾಕಿಸ್ತಾನದಿಂದ ದುಬೈಗೆ ಹೋಗಿ ಅಲ್ಲಿಂದ 9 ಗಂಟೆ ಪ್ರಯಾಣಿಸಿ ಹೈದರಾಬಾದ್‌ಗೆ ಬಂದಿಳಿದಿದೆ. ಪಾಕಿಸ್ತಾನ ತಂಡದ ಆಗಮನಕ್ಕೆ ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಸಂಭ್ರಮ ಸೂಚಿಸಿದ್ದಾರೆ‌.