Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತಕ್ಕೆ ಮತ್ತೊಂದು ಪದಕ ಖಚಿತ

ನವದೆಹಲಿ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಖಾತೆಗೆ ಮತ್ತೊಂದು ಪದಕ ಸೇರ್ಪಡೆಯಾಗಲಿದೆ.

ವುಷು ಮಹಿಳೆಯರ 60 ಕೆಜಿ ವಿಭಾಗದಲ್ಲಿ ನೊರೆಮ್ ರೋಶಿಬಿನಾ ದೇವಿ ಸೆಮಿಫೈನಲ್ ತಲುಪಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕಜಕಿಸ್ತಾನದ ಅಯ್ಮನ್ ಕಾರ್ಶಿಗಾ ಅವರನ್ನು ದೇವಿ ಸೋಲಿಸಿದರು.

2018ರಲ್ಲಿಯೂ ದೇವಿ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಸೆಮೀಸ್ ಗೆದ್ದು ಫೈನಲ್‌ಗೆ ಎಂಟ್ರಿಕೊಟ್ಟರೆ, ದೇಶಕ್ಕೆ ಮೂರನೇ ಚಿನ್ನ ಅಥವಾ ಬೆಳ್ಳಿ ಬರುವುದು ಖಚಿತ.