ಭಾರತದಲ್ಲಿ ಪ್ರಥಮ ಪ್ರದರ್ಶನ ನೀಡಲಿರುವ ಪಾಪ್ ರಾಕ್ ಬ್ಯಾಂಡ್ ಜೋನಾಸ್ ಬ್ರದರ್ಸ್
ಮುಂಬೈ: ಖ್ಯಾತ ಅಮೆರಿಕದ ಪಾಪ್ ರಾಕ್ ಬ್ಯಾಂಡ್ ಜೋನಾಸ್ ಬ್ರದರ್ಸ್ ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶನ ನೀಡಲಿದ್ದು, ಈ ಹಿನ್ನಲೆ ಶನಿವಾರ ಮುಂಬೈಗೆ ಆಗಮಿಸಿದ್ದಾರೆ.
ಶನಿವಾರ ಮುಂಜಾನೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೆ ಬಂದಿಳಿದ ಜೋನಾಸ್ ಬ್ರದರ್ಸ್ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ.
ಇದೇ ವೇಳೇ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಯಾಗಿರುವ ನಿಕ್ ಭಾರತದಲ್ಲಿ ಕಂಫರ್ಟಬಲ್ ಆಗಿಯೇ ಫೋಸ್ ಕೊಟ್ಟಿದ್ದಾರೆ. ಜೋನಸ್ ಬ್ರದರ್ಸ್ ಭಾರತದಲ್ಲಿ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲು, ಇದು ದೇಶಕ್ಕೆ ಅವರ ಮೊದಲ ಭೇಟಿಯಲ್ಲ.
ಮುಂಬೈನಲ್ಲಿ ಮಹಾಲಕ್ಷ್ಮಿ ರೇಸ್ ಕೋರ್ಸ್ನಲ್ಲಿ ಶನಿವಾರ ನಡೆಯಲಿರುವ ಬಹು-ಪ್ರಕಾರದ ಸಂಗೀತ ಉತ್ಸವ ಲೊಲ್ಲಾಪಲೂಜಾ ಇಂಡಿಯಾದ ಎರಡನೇ ಆವೃತ್ತಿಯಲ್ಲಿ ಬ್ಯಾಂಡ್ ಪ್ರದರ್ಶನ ನೀಡಲಿದೆ.