Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದಲ್ಲಿ 500 ಮಿಲಿಯನ್ ಹೂಡಿಕೆ ಮಾಡಲು ಮುಂದಾದ ‘Foxconn’

ನವದೆಹಲಿ: ಎಲೆಕ್ಟ್ರಾನಿಕ್ ಗ್ಯಾಜೆಟ್ ಹಾಗೂ ಬಿಡಿಭಾಗಗಳ ಉತ್ಪಾದನಾ ಕಂಪನಿ Foxconn ಭಾರತದಲ್ಲಿ 500 ಮಿಲಿಯನ್ ಹೂಡಿಕೆ ಮಾಡಲು ನಿರ್ಧರಿಸಿದೆ. ಇದರ ಫಲವಾಗಿ ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ತನ್ನ ಘಟಕ ಆರಂಭಿಸಲು ಮುಂದಾಗಿದೆ. ಇದರಲ್ಲಿ ಐಫೋನ್ ಘಟಕ ಹಾಗೂ Apple ಬಿಡಿಭಾಗಗಳ ಉತ್ಪಾದನೆ ಬಗ್ಗೆಯೂ ಗಮನ ಹರಿಸುವ ಉದ್ದೇಶ ಹೊಂದಿದೆ. ಸದ್ಯದರಲ್ಲೇ ಘಟಕ ಸ್ಥಾಪನೆ ಬಗ್ಗೆ ಅಧಿಕೃತ ಮಾಹಿತಿಯನ್ನು Foxconn‌ ನೀಡಲಿದೆ. ದೇಶದಲ್ಲಿ ಐಫೋ‌ನ್ ಹಾಗೂ ಅದರ ಬಿಡಿಭಾಗಗಳ ಉತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರೋತ್ಸಾಹ ನೀಡುತ್ತಿದ್ದಾರೆ. ನಾವು ಭಾರತದಲ್ಲಿ ನಮ್ಮ ಉದ್ಯಮ ಬೆಳೆಸಲು ಉತ್ತೇಜನಕಾರಿ ಎಂದು Foxconn ಹೇಳಿದೆ. ತಮಿಳುನಾಡಿನಲ್ಲಿ ಘಟಕ ಆರಂಭಿಸಲು ಈಗಾಗಲೇ ಅಲ್ಲಿನ ಸರಕಾರದೊಂ‍ದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ‌ ಎಂಬ ಮಾಹಿತಿ ಅಧಿಕೃತವಲ್ಲ. ಇದುವರೆಗೆ ನಾವು ತಮಿಳು ನಾಡು ಸರಕಾರದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು Foxconn ಹೇಳಿದೆ.