Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದಿಂದ ಕದ್ದ 100ಕ್ಕೂ ಹೆಚ್ಚು ಪುರಾತನ ವಸ್ತುಗಳನ್ನು ಹಿಂದಿರುಗಿಸಲು ಅಮೆರಿಕ ನಿರ್ಧಾರ: ಪ್ರಧಾನಿ ಮೋದಿ

ವಾಷಿಂಗ್ಟನ್: ಭಾರತದಿಂದ ಕದ್ದ 100ಕ್ಕೂ ಹೆಚ್ಚು ಪುರಾತನ ವಸ್ತುಗಳನ್ನು ಹಿಂದಿರುಗಿಸಲು ಅಮೆರಿಕ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ಕೊನೆಯ ದಿನದಂದು ಹೇಳಿದ್ದಾರೆ. ಅಮೆರಿಕದ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಮೆರಿಕ ಸರ್ಕಾರದ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ‘ಭಾರತದಿಂದ ಕಳುವಾಗಿದ್ದ ಈ ಪುರಾತನ ವಸ್ತುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಇವುಗಳನ್ನೆಲ್ಲಾ ವಾಪಸ್ ನೀಡಲು ನಿರ್ಧರಿಸಿರುವ ಅಮೆರಿಕ ಸರ್ಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸುವ ಅಮೆರಿಕದ ನಿರ್ಧಾರವು ಎರಡು ರಾಷ್ಟ್ರಗಳ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ತೋರಿಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಮೋದಿ ಈ ಪುರಾತನ ವಸ್ತುಗಳ ವಿಷಯವಾಗಿ ಜಾಗತಿಕ ಮಟ್ಟದ ನಾಯಕರೊಂದಿಗೆ ಹಲವು ಸಂದರ್ಭಗಳಲ್ಲಿ ಚರ್ಚಿಸಿದ್ದು, ಈ ವರೆಗೂ ಇಂತಹ ಅಪರೂಪದ 251 ಪ್ರಾಚೀನ ವಸ್ತುಗಳನ್ನು ವಾಪಸ್ ತರಲಾಗಿದ್ದು, ಈ ಪೈಕಿ 2014 ರಿಂದ ಈ ವರೆಗೂ 238 ವಸ್ತುಗಳನ್ನು ವಾಪಸ್ ತರಲಾಗಿದೆ. 2022 ರಲ್ಲಿ ಅಮೇರಿಕಾ ಅಧಿಕಾರಿಗಳು ಭಾರತಕ್ಕೆ ಸಂಬಂಧಿಸಿದ 307 ಪುರಾತನ ವಸ್ತುಗಳನ್ನು ವಾಪಸ್ ನೀಡಿದ್ದರು. ಕಳ್ಳಸಾಗಣೆ ಜಾಲದಿಂದ ವಶಕ್ಕೆ ಪಡೆಯಲಾಗಿದ್ದ ಇದರ ಮೌಲ್ಯ 4 ಮಿಲಿಯನ್ ಯುಎಸ್ ಡಿ ಆಗಿತ್ತು.