Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ ; ಮುಖೇಶ್ ಅಂಬಾನಿ

ನವದೆಹಲಿ: ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ನಾನು ಗೇಟ್‌ವೇ ಆಫ್ ಇಂಡಿಯಾ ನಗರದಿಂದ ಆಧುನಿಕ ಭಾರತದ ಬೆಳವಣಿಗೆಯ ಹೆಬ್ಬಾಗಿಲಿಗೆ ಬಂದಿದ್ದೇನೆ. ನಾನು ಹೆಮ್ಮೆಯ ಗುಜರಾತಿ, ವಿದೇಶಿಗರು ನವ ಭಾರತದ ಬಗ್ಗೆ ಯೋಚಿಸುವಾಗ, ನವ ಗುಜರಾತ್ ಬಗ್ಗೆ ಯೋಚಿಸುತ್ತಾರೆ. ಈ ರೂಪಾಂತರವು ಹೇಗೆ ಉಂಟಾಯಿತು ಎಂದು ಯೋಚಿಸಿದರೆ ಅದು ಒಬ್ಬ ನಾಯಕನ ಕಾರಣದಿಂದಾಗಿ. ನಮ್ಮ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ಹೊರಹೊಮ್ಮಿದವರು ಪ್ರಧಾನಿ ಮೋದಿ. ಭಾರತದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಪ್ರಧಾನಿ ಮೋದಿಯವರು ಎಂದು ಶ್ಲಾಘಿಸಿದರು.