Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದ ಕೆಮ್ಮಿನ ಸಿರಪ್ ಅಸುರಕ್ಷಿತ – ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಬಗ್ದಾದ್:ಇರಾಕ್‌ನಲ್ಲಿ ಮಾರಾಟವಾಗಿರುವ ಭಾರತದಲ್ಲಿ ತಯಾರಿಸಲಾದ ಕಾಮನ್ ಕೋಲ್ಡ್ ಕೆಮ್ಮಿನ ಸಿರಪ್‌ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲ ಎಂದು ಕಂಡುಬಂದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಕೋಲ್ಡ್ ಔಟ್ ಎಂಬ ಹೆಸರಿನ ಸಿರಪ್ ಅನ್ನು ಭಾರತದ ಫೋರ್ಟ್ಸ್ ಲ್ಯಾಬೋರೇಟರೀಸ್ ತಯಾರಿಸಿದೆ. ಗ್ಲೋಬಲ್ ಹೆಲ್ತ್ ಏಜೆನ್ಸಿಯು ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಿತ್ತು. ಇದರಲ್ಲಿ ಡೈಥಿಲೀನ್ ಮತ್ತು ಎಥಿಲೀನ್ ಗ್ಲೈಕೋಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಕಂಡುಹಿಡಿದಿರುವುದಾಗಿ ವರದಿಯಾಗಿದೆ.

ಕೆಮ್ಮಿನ ಸಿರಪ್ ತಯಾರಕರು ಹಾಗೂ ಮಾರಾಟಗಾರರು ಉತ್ಪನ್ನದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಏಜೆನ್ಸಿಗೆ ಯಾವುದೇ ಖಾತರಿಗಳನ್ನು ನೀಡಿಲ್ಲ. ಕಂಪನಿಗಳು ಈ ಆರೋಪಗಳಿಗೆ ಹಾಗೂ ಎಚ್ಚರಿಕೆಗಳಿಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕಳೆದ ವರ್ಷ ಗ್ಯಾಂಬಿಯಾದಲ್ಲಿ 66 ಹಾಗೂ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್‌ಗಳು ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಇದಾದ ಬಳಿಕ ಭಾರತದ 5 ಕಂಪನಿಗಳ ಸಿರಪ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಅದರಲ್ಲಿ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲಾಯಿತು