Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಭಾರತದ ಡಿಜಿಟಲೀಕರಣದಲ್ಲಿ ‘Google’ 10 ಬಿಲಿಯನ್ ಹೂಡಿಕೆ’ ಮಾಡಲಿದೆ: ಸಿಇಒ ಸುಂದರ್ ಪಿಚೈ

ವಾಷಿಂಗ್ಟನ್ ಡಿಸಿ : ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್​ 10 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಅವರು ಈ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಪಿಚೈ “ಐತಿಹಾಸಿಕ ಅಮೆರಿಕ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿರುವುದು ಸಂತಸವಾಗಿದೆ. ಭಾರತದ ಡಿಜಿಟಲೀಕರಣ ನಿಧಿಯಲ್ಲಿ ಗೂಗಲ್ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ನಾವು ಪ್ರಧಾನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆ. ಡಿಜಿಟಲ್ ಇಂಡಿಯಾ ಇತರ ದೇಶಗಳಿಗೆ ಬ್ಲೂಪ್ರಿಂಟ್ ಆಗಿ ಕಾರ್ಯನಿರ್ವಹಿಸುತ್ತದೆ” ಎಂದು ಪಿಚೈ ಇದೇ ವೇಳೆ ಗುಣಗಾನ ಮಾಡಿದರು. ನಾವು ಇಂದು ನಮ್ಮ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗಿಫ್ಟ್ ಸಿಟಿ ಗುಜರಾತ್‌ನಲ್ಲಿ ತೆರೆಯುವುದಾಗಿ ಘೋಷಿಸುತ್ತಿದ್ದೇವೆ ಎಂದು ಹೇಳಲು ಉತ್ಸುಕರಾಗಿದ್ದೇವೆ. ಭಾರತದಲ್ಲಿ ಗಮನಾರ್ಹವಾಗಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿಯು ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ವ್ಯಾಪಾರ ಕೇಂದ್ರವಾಗಿದೆ. ಡಿಜಿಟಲ್ ಇಂಡಿಯಾದ ಬಗ್ಗೆ ಪ್ರಧಾನಿಯವರ ಹೊಂದಿರುವ ದೃಷ್ಟಿಕೋನ ಶ್ಲಾಘನೀಯ. ಈಗ ನಾನು ಅದನ್ನು ಇತರ ದೇಶಗಳು ಅನುಸರಿಸಬಹುದಾದ ನೀಲನಕ್ಷೆಯಾಗಿ ನೋಡುತ್ತೇನೆ ಎಂದು ಪಿಚೈ ಹೇಳಿದರು.