ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ವಿದ್ಯುತ್ ಬಿಕ್ಕಟ್ಟು :ಇಂಟರ್ನೆಟ್ ಸೇವೆಯೂ ಕಡಿತ!
ಕೊಲಂಬೊ: ಭಾರತದ ನೆರೆಯ ರಾಷ್ಟ್ರವಾದ ಶ್ರೀಲಂಕಾ ದೇಶದಲ್ಲಿ ಶನಿವಾರ ಹಲವಾರು ಗಂಟೆಗಳ ಕಾಲ ವಿದ್ಯುತ್ ಸಮಸ್ಯೆ ತಲೆದೋರಿದ್ದು, ಬಹುತೇಕ ಇಡೀ ದೇಶದಲ್ಲಿ ವಿದ್ಯುತ್ ಕಡಿತಗೊಂಡಿತ್ತು.ಇದರಿಂದಾಗಿದ್ವೀಪ ರಾಷ್ಟ್ರದಾದ್ಯಂತ ಇಂಟರ್ನೆಟ್ ಸೇವೆಯೂ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ.
ಪ್ರಮುಖ ವಿದ್ಯುತ್ ಪ್ರಸರಣ ಮಾರ್ಗವಾದ ಕೊಟ್ಮಾಲೆ-ಬಿಯಾಗಮಾ ಪ್ರಸರಣ ಮಾರ್ಗದಲ್ಲಿ ಸಿಸ್ಟಮ್ ವೈಫಲ್ಯದ ನಂತರ ದ್ವೀಪದಾದ್ಯಂತ ವಿದ್ಯುತ್ ಕಡಿತವನ್ನು ಅನುಭವಿಸಿದೆ ಎಂದು ದೇಶದ ವಿದ್ಯುತ್ ಮತ್ತು ಇಂಧನ ಸಚಿವಾಲಯ ತಿಳಿಸಿದೆ.
ಶನಿವಾರ ಸಂಜೆ ಆರಂಭವಾದ ವಿದ್ಯುತ್ ವ್ಯತ್ಯಯ ಹಲವು ಗಂಟೆಗಳ ಕಾಲ ಮುಂದುವರಿದಿತ್ತು.
ಇದೀಗ ಹಂತ ಹಂತವಾಗಿ ಮರುಸ್ಥಾಪನೆ ನಡೆಯುತ್ತಿದ್ದು, ವಿದ್ಯುತ್ ಪೂರೈಕೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು ಕೆಲವು ಗಂಟೆಗಳು ತೆಗೆದುಕೊಳ್ಳಬಹುದು” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಹೆಚ್ಚಾಗಿ ವಿದ್ಯುತ್ ಉತ್ಪಾದನೆಗೆ ಜಲವಿದ್ಯುತ್ ಮೇಲೆ ಅವಲಂಬಿತವಾಗಿದೆ, ಆದರೆ ಕಲ್ಲಿದ್ದಲು ಮತ್ತು ತೈಲವನ್ನು ಇಲ್ಲಿ ವಿದ್ಯುತ್ ಉತ್ಪಾದನೆ ಸರಿದೂಗಿಸಲು ಬಳಸಲಾಗುತ್ತದೆ. ಶುಷ್ಕ ಋತುವಿನಲ್ಲಿ, ವಿದ್ಯುತ್ ಉತ್ಪಾದನೆಗೆ ಹೆಚ್ಚು ಉಷ್ಣ ಶಕ್ತಿಯನ್ನು ಬಳಸಬೇಕಾಗುತ್ತದೆ.