Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತೀಯ ಸಿನಿಮಾರಂಗದ ಶ್ರೀಮಂತ ದಂಪತಿಗಳು ಯಾರು ಗೊತ್ತಾ?

ಮುಂಬೈ:ಭಾರತೀಯ ಚಲನಚಿತ್ರೋದ್ಯಮದಲ್ಲಿ ಶ್ರೀಮಂತ ದಂಪತಿಗಳಿದ್ದಾರೆ. ಸಿನಿಮಾದಲ್ಲಿ ನಟಿಸುವ ಜೊತೆಗೆ ತಮ್ಮದೇ ಸಂಸ್ಥೆ ಮೂಲಕ ಸಿನಿಮಾಗಳನ್ನು ನಿರ್ಮಾಣ ಮಾಡುವ ದಂಪತಿಗಳು ನಮ್ಮ ಸಿನಿಮಾರಂಗದಲ್ಲಿದ್ದಾರೆ.

ದಕ್ಷಿಣ ಭಾರತದಲ್ಲಿಅತೀ ಹೆಚ್ಚು ಸಂಪತ್ತನ್ನು ಹೊಂದಿರುವ ಶ್ರೀಮಂತ ಸಿನಿಮಾ ನಿರ್ಮಾಣ ಮಾಡುವ ದಂಪತಿಯೊಂದಿದೆ. ಅವರೇ

ಸನ್ ಟಿವಿ ಮತ್ತು ಸನ್ ಪಿಕ್ಚರ್ಸ್‌ನ ಮಾಲಕರಾಗಿರುವ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಉದ್ಯಮಶೀಲ ದಂಪತಿಗಳಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.
ಈ ದಂಪತಿ ಕಳೆದ 10 ವರ್ಷಗಳಿಂದ ಸಿನಿಮಾ ನಿರ್ಮಾಣದ ಜೊತೆಗೆ ಇತರ ವ್ಯವಹಾರದಲ್ಲಿ ತೊಡಗಿದಕೊಂಡು ಭಾರತೀಯ ಕಾರ್ಪೊರೇಟ್ ವಲಯದಲ್ಲಿಯೂ ಅತಿ ಹೆಚ್ಚು ಲಾಭಾಂಶ ಪಡೆದ ದಂಪತಿಗಳಲ್ಲಿ ಒಂದಾಗಿದ್ದಾರೆ.

ಕಳೆದ ಒಂದು ದಶಕದಲ್ಲಿ 1500 ಕೋಟಿ ರೂಪಾಯಿಯ ವ್ಯವಹಾರದ ಲಾಭವನ್ನು ಮಾರನ್‌ ದಂಪತಿ ಪಡೆದಿದ್ದಾರೆ. ಇದು ಅಂಬಾನಿ ದಂಪತಿಗಳಿಸಿದ್ದಕ್ಕಿಂತ ಹೆಚ್ಚು ಎನ್ನುವುದು ವಿಶೇಷ. ಸಿನಿಮಾರಂಗದಲ್ಲಿ ಇಷ್ಟು ದೊಡ್ಡಮಟ್ಟದ ಲಾಭವನ್ನು ಬೇರೆ ಯಾವ ದಂಪತಿಯೂ ಮಾಡಿಲ್ಲ ಎನ್ನಲಾಗಿದೆ.