Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭೀಕರ ಮಳೆ ಪ್ರವಾಹಕ್ಕೆ ನಲುಗಿದ ಅಮೆರಿಕ – ರಕ್ಕಸ ರೂಪದ ಚಂಡಮಾರುತಕ್ಕೆ ಮೆಕ್ಸಿಕೋ ಜಲಾವೃತ

ಅರ್ಜೆಂಟೀನಾ ಬಳಿಕ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಅಮೆರಿಕ ತತ್ತರಿಸಿದೆ. ಮೆಕ್ಸಿಕೋ, ಕ್ಯಾಲಿಫೋರ್ನಿಯಾ ಕರಾವಳಿ ತೀರದಲ್ಲಿ ಚಂಡಮಾರುತ ರಕ್ಕಸ ರೂಪ ತಾಳಿದೆ. ಎಲ್ಲೆಲ್ಲೂ ಮಳೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಪ್ರತಾಪ ಎಲ್ಲವನ್ನೂ ಮುಳುಗಿಸಿದೆ. ವರುಣನ ಚೆಲ್ಲಾಟಕ್ಕೆ ಜನ ತತ್ತರಿಸಿದ್ದಾರೆ. ಅರ್ಜೆಂಟೀನಾ ಬಳಿಕ ಅಮೆರಿಕದ ಮೆಕ್ಸಿಕೋ ರಣಮಳೆ, ಪ್ರವಾಹಕ್ಕೆ ತತ್ತರಿಸಿದೆ. ಫೆಸಿಫಿಕ್ ಸಾಗರದಲ್ಲಿ 2 ದಿನಗಳ ಹಿಂದೆ ಉದ್ಭವಿಸಿದ್ದ ಹಿಲರಿ ಚಂಡಮಾರುತ ರಾಕ್ಷಸನ ರೂಪ ತಾಳಿದೆ. ಕ್ಯಾಲಿಫೋರ್ನಿಯಾದ ದಕ್ಷಿಣ ತುದಿಯಲ್ಲಿ ಕ್ಯಾಬೊ ಸ್ಯಾನ್ ಲ್ಯೂಕಾಸ್‌ನ ನೈಋತ್ಯಕ್ಕೆ 285 ಮೈಲುಗಳಷ್ಟು ದೂರದಲ್ಲಿ ಚಂಡಮಾರುತ ಚಲಿಸುತ್ತಿದೆ. 230 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಮಾರುತಗಳು, ಹಠಾತ್ ಪ್ರವಾಹಗಳು ಮೆಕ್ಸಿಕೋ ಜನರನ್ನು ಕಂಗೆಡಿಸಿವೆ. ಪ್ರವಾಹ ಪ್ರತಾಪ ತೋರುತ್ತಿದೆ. ಪರಿಸ್ಥಿತಿ ಅಯೋಮಯ ಆಗಿದೆ. ಮೆಕ್ಸಿಕೊದ ಬಾಜಾ ಹಾಗೂ ಕ್ಯಾಲಿಫೋರ್ನಿಯಾದ ಸಾಂಟಾ ರೊಸಾಲಿಯಾದಲ್ಲಿ ಧಾರಾಕಾರ ಮಳೆಯಾಗ್ತಿದ್ದು ರಣಪ್ರವಾಹ ಕಂಡು ಬಂದಿದೆ. ನದಿಯಂತೆ ನೀರು ಭೋರ್ಗರೆಯುತ್ತಿದ್ದು ನಗರದ ಬಡಾವಣೆಗಳು ಮುಳುಗಿವೆ. ಭೋರ್ಗರೆಯುತ್ತಿರುವ ಪ್ರವಾಹದ ನೀರು ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ಕೊಚ್ಚಿಕೊಂಡು ಹೋಗಿವೆ. ಪ್ರವಾಹಕ್ಕೆ ಸಿಲುಕಿದ ವಾಹನಗಳು ಆಟಿಕೆಗಳಂತೆ ತೇಲಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.