Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭೀಕರ ರಸ್ತೆ ಅಪಘಾತ- ಸಂಸದ ಸತೀಶ್‌ ಚಂದ್ರ ಅಸ್ಪತ್ರೆಗೆ ದಾಖಲು, ಇಬ್ಬರ ಸ್ಥಿತಿ ಗಂಭೀರ

ಪಾಟ್ನಾ: ಭಾರತೀಯ ಜನತಾ ಪಕ್ಷದ ರಾಜ್ಯಸಭಾ ಸಂಸದ ಸತೀಶ್ ಚಂದ್ರ ದುಬೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ತಡರಾತ್ರಿ ಪಾಟ್ನಾದಲ್ಲಿ ಸಂಭವಿಸಿದೆ.

ಪಾಟ್ನಾದ ಮಹಾತ್ಮ ಗಾಂಧಿ  ಸೇತುವೆಯ ಮೇಲೆ ಕಾರು ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುಬೆ ಸೇರಿದಂತೆ ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು,ಅಪಘಾತದಲ್ಲಿ ಸಂಸದರ ಚಾಲಕ ಮತ್ತು ಅಂಗರಕ್ಷಕನ ಸ್ಥಿತಿ ಚಿಂತಾಜನಕವಾಗಿದೆ. ಸಂಸದ ಸತೀಶ್ ಚಂದ್ರ ಅವರಿಗೂ ಗಾಯಗಳಾಗಿದ್ದು, ಸದ್ಯ ಪಾಟ್ನಾದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಸದರು ಭಾನುವಾರ ರಾತ್ರಿ ಬಗಾಹಾದಿಂದ ಪಾಟ್ನಾಗೆ ಹಿಂತಿರುಗುತ್ತಿದ್ದಾಗ ಗಾಂಧಿ  ಸೇತುವೆಯ ಮೇಲೆ ಅವರ ಕಾರು ಅಪಘಾತಕ್ಕೀಡಾಗಿದೆ. ಕಂಟೈನರ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ.

48 ವರ್ಷದ ಬಿಜೆಪಿ ಸಂಸದ, ಸತೀಶ್ ಚಂದ್ರ ದುಬೆ ಅವರು 2022 ರಲ್ಲಿ ಸಂಸತ್ತಿನ ಮೇಲ್ಮನೆಗೆ ಚುನಾಯಿತರಾಗಿದ್ದರು. ಇದಕ್ಕೂ ಮೊದಲು ಅವರು ಬಿಹಾರದ ವಾಲ್ಮೀಕಿ ನಗರ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.