Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಪಯಣ ಆರಂಭಿಸಿದ ಚಂದ್ರಯಾನ-3 ನೌಕೆ – ಇಸ್ರೋದಿಂದ ಮಹತ್ವದ ಅಪ್‌ಡೇಟ್

ಶ್ರೀಹರಿಕೋಟಾ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆಯು ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಪಯಣ ಆರಂಭಿಸಿದೆ. ಈ ಬಗ್ಗೆ ಸ್ವತಃ ಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ–3 ‘ಬಾಹ್ಯಾಕಾಶ ನೌಕೆ’ಯನ್ನು ಟ್ರಾನ್ಸ್ಲೂನಾರ್ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ. ‘ಚಂದ್ರಯಾನ–3 ಬಾಹ್ಯಾಕಾಶ ನೌಕೆ ಭೂಮಿಯ ಸುತ್ತಲಿನ ಕಕ್ಷೆಯನ್ನು ಪೂರ್ಣಗೊಳಿಸಿದ್ದು, ಚಂದ್ರನ ಕಕ್ಷೆಯತ್ತ ಸಾಗಿದೆ. ಇದೀಗ ‘ಲೂನಾರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ’ ಪಥದಲ್ಲಿ ನೌಕೆ ಸಾಗುತ್ತಿದೆ’ ಎಂದು ಇಸ್ರೊ ತಿಳಿಸಿದೆ. ನಿನ್ನೆ ಸೋಮವಾರ ಮಧ್ಯರಾತ್ರಿ ಭೂಮಿಯ ಕಕ್ಷೆಯಿಂದ ಬೇರ್ಪಟ್ಟ ನೌಕೆ ಚಂದ್ರನೆಡೆಗೆ ಸಾಗಿದ್ದು, ನೌಕೆ ಚಂದ್ರನತ್ತ ಆಗಮಿಸುತ್ತಿದ್ದಂತೆ ‘ಲೂನಾರ್–ಆರ್ಬಿಟ್ ಇನ್ರ್ಸಶನ್’ (ಎಲ್ಓಐ) ಕಾರ್ಯ ಪ್ರಾರಂಭವಾಗುತ್ತದೆ. ಆಗಸ್ಟ್ 5ಕ್ಕೆ ಎಲ್ಓಐ ಮಾಡಲು ಯೋಜಿಸಲಾಗಿದೆ. ಆಗಸ್ಟ್ 17ರಂದು ಪ್ಯೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.