Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಂಗಳೂರು ಪಾಲಿಕೆ ಸಭೆಯಲ್ಲಿ ನೀರಿನ ಗಂಭೀರ ಚರ್ಚೆ, ಕೆಲ ಅಧಿಕಾರಿಗಳಿಗೆ ನಿದ್ದೆ ಮಂಪರು-ಮತ್ತೆ ಕೆಲವರು ಮೊಬೈಲ್ ಚಾಟಿಂಗ್, ಕಾಲ್‌ನಲ್ಲಿ ಬ್ಯುಸಿ ..!

ನೀರಿಗಾಗಿ ಗಂಭೀರ ಚರ್ಚೆ ನಡೆಯುವ ಪಾಲಿಕೆ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ ಅಧಿಕಾರಿಗಳು ಮೊಬೈಲ್ ನಲ್ಲಿ ಚಾಟಿಂಗ್, ನಿದ್ದೆ ತೂಕಡಿಸಿದ ಘಟನೆ ಮಂಗಳವಾರದ ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಮಂಗಳೂರು : ನೀರಿಗಾಗಿ ಗಂಭೀರ ಚರ್ಚೆ ನಡೆಯುವ ಪಾಲಿಕೆ ಸಭೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕಾದ ಅಧಿಕಾರಿಗಳು ಮೊಬೈಲ್ ನಲ್ಲಿ ಚಾಟಿಂಗ್, ನಿದ್ದೆ ತೂಕಡಿಸಿದ ಘಟನೆ ಮಂಗಳವಾರದ ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಮೇಯರ್ ಸುಧೀರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಕರಾವಳಿ ಭಾಗದಲ್ಲಿ ಈ‌ ಬಾರಿ ಮಳೆಯ ಅಭಾವ ಎದುರಾದ ಹಿನ್ನಲೆಯಲ್ಲಿ ಮಂಗಳೂರು ನಗರಕ್ಕೆ ನೀರು ಪೂರೈಸುವ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿತವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಮಂಗಳೂರು ನಗರ ಎದುರಿಸಬೇಕಾದ ನೀರಿನ ಸಮಸ್ಯೆಯ ವಿಚಾರ‌ ಪ್ರಮುಖವಾಗಿ ಸಭೆಯಲ್ಲಿ ಚರ್ಚೆಯಾಗುತ್ತಿತ್ತು.

ಆದರೆ ಸಭೆಯಲ್ಲಿ ಗಂಭೀರವಾಗಿ ಸಮಸ್ಯೆಯನ್ನು ಆಲಿಸಬೇಕಿದ್ದ ಅಧಿಕಾರಿಗಳು ಮಾತ್ರ ಜನಪ್ರತಿನಿಧಿಗಳು‌ ನಡೆಸುತ್ತಿದ್ದ ಚರ್ಚೆಗೆ ಕ್ಯಾರೇ ಎನ್ನದೆ ವರ್ತಿಸುತ್ತಿದ್ದ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಲವು ಅಧಿಕಾರಿಗಳು ಮೊಬೈಲ್ ಹಿಡಿದು ಯಾರಲ್ಲೋ ಚಾಟ್ ಮಾಡಿ ಆನಂದಿಸುತ್ತಿದ್ದರೆ, ಇನ್ನು ಕೆಲವು ಅಧಿಕಾರಿಗಳು ನಿದ್ದೆಗೆ ಜಾರಿದ್ದರು ಮತ್ತೆ ಕೆಲವರು ತೂಕಾಡಿಸುತ್ತಿದ್ದರು.

ಇನ್ನು ಕೆಲವು ಅಧಿಕಾರಿಗಳು ಸಭೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಪರಸ್ಪರ ಹರಟೆಯಲ್ಲಿ ಬ್ಯುಸಿಯಾಗಿದ್ದರು.

ತಮ್ಮ ಸಮಸ್ಯೆಗಳಿಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವ ತೆರಿಗೆ ಕಟ್ಟುವ ಮಂಗಳೂರಿನ ಮಹಾ ಜನತೆಗೆ ಈ ಅಧಿಕಾರಿಗಳು ಈ ಬಾರಿ ನೀರಿನ ಬದಲು ಖಾಲಿ ಚೊಂಬು ಕೊಡುವುದಂತು ನಿಶ್ವಿತವಾಗಿದೆ,