ಮಗಳ ಮದುವೆಯ ಆರ್ಥಿಕ ಸಂಕಷ್ಟಕ್ಕೆ ಪೈವ್ ಸ್ಟಾರ್ ಹೊಟೇಲ್ ನಲ್ಲಿ ನೇಣಿಗೆ ಶರಣಾದ ದಂಪತಿ…!!
ಕೇರಳ ಸೆಪ್ಟೆಂಬರ್ 09 : ಮಗಳ ಮದುವೆಯಿಂದಾದ ಆರ್ಥಿಕ ಸಂಕಷ್ಟಕ್ಕೆ ದಂಪತಿಗಳಿಬ್ಬರು ಮಗಳ ಮದುವೆ ಮಾಡಿಸಿದ್ದ ಪೈವ್ ಸ್ಟಾರ್ ಹೊಟೇಲ್ ನಲ್ಲಿಯೇ ನೇಣಿ ಬಿಗಿದು ಸಾವನಪ್ಪಿದ ಘಟನೆ ತಿರುವವಂತಪುರದಲ್ಲಿ ನಡೆದಿದೆ.
ಐದು ದಿನಗಳ ಹಿಂದೆ ಈ ದಂಪತಿ ಈ ಫೈವ್ ಸ್ಟಾರ್ ಹೊಟೇಲ್‌ಗೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಹೊಟೇಲ್‌ನಲ್ಲಿ ಸ್ವಲ್ಪ ಸಮಯದ ಹಿಂದೆ ದಂಪತಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಹೊಟೇಲ್‌ಗೆ ಆಗಮಿಸಿದ ದಂಪತಿ ಎಲ್ಲೋ ಹೊರಗೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹೊಟೇಲ್ ಸಿಬ್ಬಂದಿ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ದಂಪತಿ ನೇಣಿಗೆ ಶರಣಾಗಿದ್ದಾರೆ.
ಹೊಟೇಲ್ ರೂಮ್‌ನಲ್ಲಿ ಡೆತ್‌ನೋಟು ಸಿಕ್ಕಿದ್ದು, ಅದರಲ್ಲಿ ಉಲ್ಲೇಖಿಸಿದಂತೆ, ಆಕೆಯನ್ನು ಇದೇ ಹೊಟೇಲ್‌ನಲ್ಲಿ ಮದುವೆ ಮಾಡಿ ಕೊಡಲಾಗಿದ್ದು, ಪ್ರಸ್ತುತ ಆಕೆ ಗರ್ಭಿಣಿಯಾಗಿದ್ದಾಳೆ. ಪ್ರಸ್ತುತ ಸಂತೋಷದಿಂದ ಇರುವ ಆಕೆಗೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ತೊಂದರೆ ನೀಡಲು ಇಷ್ಟವಿಲ್ಲ, ನಮ್ಮ ಸಾವಿಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿನ ನಂತರ ಈ ವಿಷಯವಾಗಿ ನಮ್ಮ ಮಗಳಿಗೆ ಯಾವುದೇ ತೊಂದರೆ ನೀಡಬೇಡಿ ಅಲ್ಲದೇ ನಮ್ಮ ಶವವನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಅಲ್ಲದೇ ಮಗಳು ಉತ್ತರಗಳಿಗೆ ಈ ವಿಚಾರವನ್ನು ತಿಳಿಸಿ ಎಂದು ಡೆತ್‌ನೋಟ್‌ನಲ್ಲಿ ದಂಪತಿ ಬರೆದಿದ್ದಾರೆ.