Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಡಗಾಸ್ಕರ್ ದ್ವೀಪದಲ್ಲಿ ಕಾಲ್ತುಳಿತ: 12 ಮಂದಿ ಸಾವು

ಮಡಗಾಸ್ಕರ್ ದ್ವೀಪದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಸುಮಾರು 80 ಮಂದಿ ಗಾಯಗೊಂಡಿದ್ದಾರೆ.

ದೇಶದ ರಾಜಧಾನಿ ಅಂಟಾನಾನರಿವೊದಲ್ಲಿ 11 ನೇ ‘ಇಂಡಿಯನ್ ಓಷನ್ ಗೇಮ್ಸ್’ ಉದ್ಘಾಟನಾ ಸಮಾರಂಭದಲ್ಲಿ 50,000 ಪ್ರೇಕ್ಷಕರು ಭಾಗವಹಿಸಿದ್ದರು. ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಪರಸ್ಪರ ತಳ್ಳಿಕೊಂಡು ಕಾಲ್ತುಳಿತ ನಡೆದಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಆಟಗಳನ್ನು ನೈಋತ್ಯ ಹಿಂದೂ ಮಹಾಸಾಗರದ ದ್ವೀಪಗಳ ನಡುವೆ ನಡೆಸಲಾಗುತ್ತದೆ.