Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಡಿಕೇರಿ: ಖಾಸಗಿ ವಾಹನಕ್ಕೆ ಪೊಲೀಸ್ ಫಲಕ|ಅಮಾಯಕರ ಮೇಲೆ ನಕಲಿ ಪೊಲೀಸನಿಂದ ಹಲ್ಲೆ

ಮಡಿಕೇರಿ: ನಾಡ ಹಬ್ಬ ದಸರಾ ಸಂದರ್ಭದಲ್ಲಿ, ಕೆಲವು ಪುಂಡರು ಖಾಸಗಿ ವಾಹನದ ಮುಂಭಾಗದ ಗಾಜಿಗೆ ಪೊಲೀಸ್ ಇಲಾಖೆಯ ವಾಹನದಂತೆ ದಪ್ಪ ಅಕ್ಷರಗಳಲ್ಲಿ ಪೊಲೀಸ್ ಎಂದು ಬರೆದುಕೊಂಡು ಬಂದಿದ್ದರು.ಈ ಸಂದರ್ಭದಲ್ಲಿ ಇಬ್ಬರು ಅಮಾಯಕ ಯುವಕರ ಮೇಲೆ ಮಾರಾಣಂತಿಕ ಹಲ್ಲೆ ನಡೆಸಿದ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು. ಈ ವ್ಯಕ್ತಿಯು ರಾಜಾರೋಷವಾಗಿ ಪೊಲೀಸ್ ಬೋರ್ಡ್ ಹಾಕಿಕೊಂಡು ವಾಹನದಲ್ಲಿ ಮಡಿಕೇರಿಯ ರಾಜಬೀದಿಯಲ್ಲಿ ತಿರುಗಿಕೊಂಡಿದ್ದರೂ ಯಾವುದೇ ಪೊಲೀಸರು ಈತನನನ್ನು ತಡೆದು ಪ್ರಶ್ನೆ ಮಾಡದಿರುವುದು ಅನುಮಾನಕ್ಕೆ ಎಡೆಮಾಡಿದೆ.ಅಲ್ಲದೇ ಹಲ್ಲೆಗೆ ಒಳಗಾದ ಮಡಿಕೇರಿಯ ಇಬ್ಬರು ಯುವಕರಿಬ್ಬರಿಗೆ ಪ್ರಕರಣ ದಾಖಲಿಸದಂತೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹೇಳಲಾಗಿದೆ. ಇನ್ನಾದರೂ ಪೊಲೀಸ್ ಇಲಾಖೆಯವರು ಈತನ ಮೇಲೆ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.