Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಣಿಪಾಲ : ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು – ವೈದ್ಯ ಸ್ಥಳದಲ್ಲೇ ಮೃತ್ಯು

ಮಣಿಪಾಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವೈದ್ಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಜೂ.30 ರ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಮೃತ ವೈದ್ಯರನ್ನು ಸ್ಥಳೀಯ  ಖಾಸಗಿ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಎಂದು ಗುರುತಿಸಲಾಗಿದೆ. ಇವರು ಮೂಲತಃ ಅವರ ಬೆಂಗಳೂರಿನವರಾಗಿದ್ದಾರೆ.

ಜೊತೆಗಿದ್ದ ಅವರ ಗೆಳೆಯರಾದ ಕೇರಳದ ಸಂಗೀತ್ ಮತ್ತು ಉತ್ತರಪ್ರದೇಶದ ದಿವಿತ್ ಸಿಂಗ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪಶ್ಚಿಮ ಕೀನ್ಯಾ: ಭೀಕರ ರಸ್ತೆ ಅಪಘಾತ; 48 ಜನ ದುರ್ಮರಣ

ಶುಕ್ರವಾರ ರಾತ್ರಿ ಮೂವರು ಗೆಳೆಯರು ಊಟ ಮುಗಿಸಿ ತಮ್ಮ ಫ್ಲ್ಯಾಟ್ ಗೆ ವಾಪಾಸಾಗುತ್ತಿದ್ದ ವೇಳೆ ಹೋಟೆಲ್ ಹಾಟ್ ಆಂಡ್ ಸ್ಪೈಸಿ ಎದುರುಗಡೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ತಲೆಗೆ ತೀವ್ರಗಾಯಗಳಾಗಿ ಸೂರ್ಯನಾರಾಯಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.