ಮಣಿಪುರಕ್ಕೆ ಬರದ ಮೋದಿ ಮ್ಯಾಚ್ ನೋಡಲು ಹೋಗಿದ್ದು ಎಷ್ಟು ಸರಿ : ಪ್ರಿಯಾಂಕಾ ಸಿಡಿಮಿಡಿ
ಜೈಪುರ : ಭಾರತ ಆಸ್ಟ್ರೇಲಿಯಾ ಮಧ್ಯೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಅಹಮದಾಬಾದ್ಗೆ ಹೋಗುವ ಪ್ರಧಾನಿ ಮೋದಿ ಅವರಿಗೆ ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಆಗಲಿಲ್ಲವೇ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ನಾಯಕತ್ವದಲ್ಲಿ ಬಿಜೆಪಿ ಹೇಗೆ ಶ್ರೀಮಂತ ಪಕ್ಷವಾಗಿ ಹೊರವೊಮ್ಮಿದೆ ಎಂಬುವುದನ್ನು ಅವರನ್ನೇ( ನರೇಂದ್ರ ಮೋದಿ) ಪ್ರಶ್ನಿಸಬೇಕು’ ಎಂದಿದ್ದಾರೆ.’ಮಣಿಪುರದಲ್ಲಿ ಗಲಭೆ ಪ್ರಾರಂಭವಾಗಿ ಸುಮಾರು ಏಳು ತಿಂಗಳು ಕಳೆದರೂ, ಈವರೆಗೂ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ವಿಶ್ವಕಪ್ ಪಂದ್ಯ ವೀಕ್ಷಿಸಲು ತೆರಳಿದ್ದರು’ ಎಂದು ಟೀಕಿಸಿದ್ದಾರೆ. ‘ಭಾರತ ಕ್ರಿಕೆಟ್ ತಂಡದವರು ಅವರ ಕಠಿಣ ಪರಿಶ್ರಮದಿಂದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಿದರು. ಭಾರತ ವಿಶ್ವಕಪ್ ಗೆದ್ದರೆ ಅದರ ‘ಕ್ರೆಡಿಟ್’ ಪಡೆಯಲು ಮೋದಿ ಕ್ರೀಡಾಂಗಾಣಕ್ಕೆ ತೆರಳಿದ್ದರು. ಪ್ರಧಾನಿಯಾಗಿ ಪಂದ್ಯ ವೀಕ್ಷಣೆಗೆ ಹೋಗುವುದು ಹೆಮ್ಮೆ ಹಾಗೂ ಗೌರವ ಸಂಕೇತವಿರಬಹುದು. ಆದರೆ ಮಣಿಪುರ ವಿಚಾರದಿಂದ ದೂರ ಉಳಿದಿದ್ದು ಏಕೆ’ ಎಂದು ಪ್ರಶ್ನಿಸಿದ್ದಾರೆ.