Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮದ್ಯ ಖರೀದಿಗೆ ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡಿದ ದಂಪತಿ

ಪ.ಬಂಗಾಳ; ಪಾನಿಹಟಿಯಲ್ಲಿ ಮದ್ಯ ಖರೀದಿಗೆ ಬೇಕಾದ ಹಣಕ್ಕಾಗಿ ತಮ್ಮ ಆರು ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವು ಶಾಮೀಲಾಗಿರುವ ಸಾಧ್ಯತೆಯನ್ನು ಪೊಲೀಸರು ತಿಳಿಸಿದ್ದಾರೆ. ಆದರೆ ಮಾರಾಟ ಮಾಡಿರುವ ಮಗು ಇನ್ನೂ ಕೂಡಾ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಂದೆ ಜೈದೇವ್ ಚೌಧುರಿ ತಾಯಿ ಸತಿ ಚೌಧುರಿ ಹಾಗೂ ತಾತ ಕನಾಯಿ ಚೌಧುರಿ ಎಂಬವರ ಬಂಧನ ನಡೆದಿದೆ.

ಮಗುವನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಬಗ್ಗೆ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ಸಮಯದಿಂದ ದಂಪತಿಯ ಮಗುವು ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಮಗುವಿನ ಬಗ್ಗೆ ಸ್ಥಳೀಯರು ವಿಚಾರಿಸಿದಾಗಲೆಲ್ಲಾ ಅದನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿರುವುದಾಗಿ ದಂಪತಿ ಹೇಳಿಕೊಳ್ಳುತ್ತಿದ್ದರು.ಸಂಶಯಗೊಂಡ ನೆರೆಹೊರೆಯವರು ಸ್ಥಳೀಯ ನಗರಸಭಾ ಸದಸ್ಯನಿಗೆ ಈ ವಿಷಯ ತಿಳಿಸಿದ್ದು, ಆತ ಅದನ್ನು ಪೊಲೀಸರ ಗಮನಕ್ಕೆ ತಂದಾಗ ಅಸಲಿಯತ್ತು ಬಯಲಾಗಿದೆ.