ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ-28 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ
ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ 28 ಶಾಸಕರು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ
ಸಂಪುಟ ಸಚಿವರ ಪಟ್ಟಿಯಲ್ಲಿ ವಿಜಯ್ ಶಾ, ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಪಟೇಲ್, ರಾಕೇಶ್ ಸಿಂಗ್, ಕರಣ್ ಸಿಂಗ್ ವರ್ಮಾ, ರಾವ್ ಉದಯ್ ಪ್ರತಾಪ್ ಸಿಂಗ್ ಸೇರಿದಂತೆ 18 ಶಾಸಕರು ಇದ್ದಾರೆ. ಇದೇ ವೇಳೆ 6 ಮಂದಿ ನಾಯಕರನ್ನು ರಾಜ್ಯ ಸಚಿವರನ್ನಾಗಿ (ಸ್ವತಂತ್ರ ಉಸ್ತುವಾರಿ) ಹಾಗೂ 4 ಮಂದಿಗೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.
ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಸಿಂಗ್ ಪಟೇಲ್, ರಾಕೇಶ್ ಸಿಂಗ್, ಕರಣ್ ಸಿಂಗ್ ವರ್ಮಾ, ರಾವ್ ಉದಯ್ ಪ್ರತಾಪ್ ಸಿಂಗ್, ವಿಜಯ್ ಶಾ, ಸಂಪಾಟಿಯಾ ಯುಕೆ, ತುಳಸಿರಾಮ್ ಸಿಲಾವತ್, ಆಂಡಾಲ್ ಸಿಂಗ್ ಕಂಸನಾ, ನಿರ್ಮಲಾ ಭೂರಿಯಾ, ಗೋವಿಂದ್ ಸಿಂಗ್ ರಜಪೂತ್, ವಿಶ್ವಾಸ್ ಸಾರಂಗ್, ನಾಗರ್ ಸಿಂಗ್ ಚೌಹಾಣ್, ನಾರಾಯಣ ಸಿಂಗ್ ಕುಶ್ವಾಹ, ಪ್ರದ್ಯುಮನ್ ಸಿಂಗ್ ತೋಮರ್, ರಾಕೇಶ್ ಶುಕ್ಲಾ, ಚೇತನ್ ಕಶ್ಯಪ್, ಇಂದರ್ ಸಿಂಗ್ ಪರ್ಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಿಸಿದರು.
ರಾಧಾ ಸಿಂಗ್, ಪ್ರತಿಮಾ ಬಗ್ರಿ, ದಿಲೀಪ್ ಅಹಿರ್ವಾರ್, ನರೇಂದ್ರ ಶಿವಾಜಿ ಪಟೇಲ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಭೋಧನೆ ಮಾಡಿದರು. ದಿಲೀಪ್ ಜೈಸ್ವಾಲ್, ಗೌತಮ್ ತೇಟ್ವಾಲ್, ಲಖನ್ ಪಟೇಲ್, ಕೃಷ್ಣ ಗೌರ್, ಧರ್ಮೇಂದ್ರ ಲೋಧಿ, ನಾರಾಯಣ ಸಿಂಗ್ ಪವಾರ್ ಸ್ವತಂತ್ರ ಉಸ್ತುವಾರಿ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡರು.