Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಧ್ಯ ಪ್ರದೇಶದಲ್ಲಿ ಘೋರ ಪಟಾಕಿ ದುರಂತ – ಘಟನೆ ಖಂಡಿಸಿ ಆಟೋಂ ಬಾಂಬ್ ಹಾರ ಹಾಕಿಕೊಂಡು ವಿಭಿನ್ನ ಪ್ರತಿಭಟನೆ

ಭೂಪಾಲ್ : ಮಧ್ಯ ಪ್ರದೇಶದಲ್ಲಿ ನಡೆದ ಪಟಾಕಿ ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದುರಂತಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ದುರಂತ ಹಿನ್ನೆಲೆಯಲ್ಲಿ ಹರ್ದಾ ಕ್ಷೇತ್ರದ ಕಾಂಗ್ರೆಸ್​ ಎಂಎಲ್ಎ ವಿಭಿನ್ನವಾಗಿ ಪ್ರತಿಭಟನೆ ನಡೆಸಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಕಾಂಗ್ರೆಸ್​ ಎಂಎಲ್ಎ ರಾಮ್ ಕಿಶೋರ್ ಡೋಗ್ನೆ, ಆಟೋಂ ಬಾಂಬ್ ಹಾರ ಹಾಕಿಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಫೆಬ್ರವರಿ 6ರಂದು ಹರ್ದಾದಲ್ಲಿ ಪಟಾಕಿ ಅವಘಡ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಸಂಭವಿಸಿದ ಪಟಾಕಿ ಫ್ಯಾಕ್ಟರಿ ಬಿಜೆಪಿ ಸಚಿವರದ್ದಂತೆ. ಹೀಗಾಗಿ, ಕಾಂಗ್ರೆಸ್​ ಶಾಸಕ ರಾಮ್ ಕಿಶೋರ್ ಡೋಗ್ನೆ ಆಟೋಂ ಬಾಂಬ್ ಹಾರ ಹಾಕಿಕೊಂಡು ಮಧ್ಯಪ್ರದೇಶ ಲೋಕಸಭೆ ಕಚೇರಿಗೆ ಆಗಮಿಸಿ ಅಕ್ರಮವಾಗಿ ಪಟಾಕಿ ಫ್ಯಾಕ್ಟರಿ ನಡೆಸ್ತಿದ್ದಾರೆ ಅಂತ ಆರೋಪಿಸಿ ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ ಶಾಸಕ ವಿಭಿನ್ನ ಪ್ರತಿಭಟನೆ ಗಮನಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು, ಇದನ್ನು ನೆಟ್ಟಿಗರು ಕಂಡು ಶಾಕ್ ಆಗಿದ್ದಾರೆ.