Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮನೆಗೆ ಬರಲಿದೆ ಉಚಿತ ಆರೋಗ್ಯ ಸೇವೆ

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ನೀಡಿದ ಬೆನ್ನಲ್ಲೇ ಮತ್ತೊಂದು ಜನಪ್ರಿಯ ಯೋಜನೆ ಜಾರಿಗೆ ಬರಲಿದೆ.

ಮನೆ-ಮನೆಗೆ ಕ್ಲಿನಿಕ್‌ ಸೇವೆ, ಉಚಿತ ಔಷಧ ನೀಡುವ ಮೂಲಕ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವುದು ಸರ್ಕಾರದ ಉದ್ದೇಶ. ಅಂದರೆ, ಮೆಡಿಸಿನ್‌ಗಾಗಿ ಇನ್ನು ರೋಗಿಗಳು ಅಲೆದಾಡುವ ಅಗತ್ಯವಿಲ್ಲ.

ಯಾಕೆಂದರೆ ಮನೆ ಮನೆಗೆ ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ವ್ಯವಸ್ಥೆ. ಬಡ ಜನರ ಪಾಲಿಗೆ ಮಹತ್ವದ ಭಾಗ್ಯ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಆರಂಭದಲ್ಲಿಯೇ ಖಾಯಿಲೆ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಬಡ ಜನರ ಸಾವಿನ ಪ್ರಮಾಣ ಕಡಿಮೆ ಮಾಡಿ ಉತ್ತಮ ಆರೋಗ್ಯದ ಉದ್ದೇಶದಿಂದ ಈ ಯೋಜನೆಗೆ ಜಾರಿಗೆ ಇಲಾಖೆ ಮುಂದಾಗಿದೆ. ಈ ಗೃಹ ಆರೋಗ್ಯ ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ.