ಮನೆಯಲ್ಲಿರುವ ಏಲಕ್ಕಿಯಲ್ಲೊಂದು ಮನೆಮದ್ದು..!
ಏಲಕ್ಕಿ ಪ್ರತಿದಿನ ಅಡುಗೇಕೋಣೆಯಲ್ಲಿರುವ ಅಡುಗೆ ಮಿತ್ರ. ಇದರಲ್ಲಿ ಅನೇಕ ಅಡುಗೆ ಸಹಕಾರಿ ಗುಣವಿದೆ.
•ಏಲಕ್ಕಿಯು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಲು ಬಹಳ ಸಹಕಾರಿ.ಅಜೀರ್ಣವಾಗುವ ಸಂಭಾವತೆಯಲ್ಲಿ ಊಟಮಾಡಿದ ನಂತರ ಏಲಕ್ಕಿ ಸಿಪ್ಪೆ ಸಮೇತ ಜಗಿಯುದು ಉತ್ತಮ
•ಭಾರತೀಯ ಆಹಾರಪದ್ದತಿಯ ಅಧ್ಯಯನಕಾರರು ಏಲಕ್ಕಿಯನ್ನು ಆಹಾರಪದಾರ್ಥಗಳಲ್ಲಿ ಬಳಸುದರ ಕುರಿತು ಸಂಶೋಧನೆ ನಡೆಸಿದ್ದು ಏಲಕ್ಕಿಯು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
•ಏಲಕ್ಕಿಯು ಭೇದಿ ತಡೆಯಲು ಆಮ್ಲೆಯತೆ ಹೆಚ್ಚಾಗುದನ್ನು ತಡೆಯಲು ಸಹಕಾರಿ, ಏಲಕ್ಕಿಯ ಆಂಟಿ ಆಕ್ಸಿಡೆಂಟ್ ಹೃದಯದ ಅರೋಗ್ಯ ವೃದ್ಧಿಪಡಿಸುವಲ್ಲಿ ಸಹಕಾರಿ.
ಏಲಕ್ಕಿಯು ಸ್ವಲ್ಪ ಪ್ರಮಾಣದಲ್ಲಿ ನಾರಿನ ಅಂಶವನ್ನು ಹೊಂದಿದ್ದು ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾರ್ವಡ್ ಮೆಡಿಕಲ್ ಸ್ಕೂಲ್ ನ ವರದಿಯು ಏಲಕ್ಕಿ ಹೃದಯಕ್ಕೆ ಉತ್ತಮ ಎಂಬುದನ್ನು ಸಾಕ್ಷಿಕರಿಸಿದೆ.
ಕ್ಯಾನ್ಸರ್ ಬರುವಂತಹ ಸಂಭಾವತೆಯನ್ನು ಏಲಕ್ಕಿ ಕಡಿಮೆ ಮಾಡುತ್ತದೆ. ಮೂತ್ರವರ್ದಿಸುವ ಗುಣವನ್ನು ಏಲಕ್ಕಿ ಹೊಂದಿದ್ದು, ದೇಹ ಶುದ್ದಿಯಾಗಲು ಸಹಕರಿಸುತ್ತದೆ.
• ಹೈಪರ್ ತೆನ್ಶನ್ ಮತ್ತು ಮೂರ್ಛೆರೋಗ ತಡೆಯುವಲ್ಲಿ ಏಲಕ್ಕಿ ಅನುಕೂಲ.
ಮತ್ತು ಡಿಪ್ರೆಶನ್ ವಿರುದ್ಧ ಹೋರಾಡಲು ರಕ್ತ ಸಂಚಾರ ಹೆಚ್ಚಿಸಲು ಕೂದಲಿನ ಆರೋಗ್ಯ ಹೆಚ್ಚಿಸಲು ಸಹಕಾರಿ.