ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಕೆ.ಜೆ ಜಾಯ್ ನಿಧನ
ಚೆನ್ನೈ: ಮಲಯಾಳಂ ಸಿನಿರಂಗದ ಹಿರಿಯ ಸಂಗೀತ ನಿರ್ದೇಶಕ ಕೆ.ಜೆ ಜಾಯ್(77) ಅವರು ಇಂದು ಚೆನ್ನೈನ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕೆ.ಜೆ ಜಾಯ್ ಅವರು ಎಲೆಕ್ಟ್ರಾನಿಕ್ ಉಪಕರಣಗಳ ಪ್ರಮುಖ ಬಳಕೆಯಿಂದಾಗಿ ಮಲಯಾಳಂ ಚಿತ್ರರಂಗದ ಮೊದಲ ‘ಟೆಕ್ನೋ ಮ್ಯೂಸಿಷಿಯನ್’ ಎಂದು ಕೂಡ ಕರೆಯಲ್ಪಟ್ಟಿದ್ದರು.
ಇನ್ನು ಮಲಯಾಳಂ ಚಿತ್ರರಂಗಕ್ಕೆ ಕೀಬೋರ್ಡ್ ನ್ನು ಪರಿಚಯಿಸಿದ ಕೀರ್ತಿ ಕೂಡ .ಜೆ ಜಾಯ್ ಅವರಿಗೆ ಸಲ್ಲುತ್ತದೆ.