Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಳೆಗಾಲದಲ್ಲಿ ಮಕ್ಕಳಿಗೆ ಈ ಆಹಾರ ನೀಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು

ಮಾನ್ಸೂನ್‌ ಶುರುವಾಗಿದೆ, ಶಾಲೆಯೂ ತೆರೆದಿದೆ ಇದರಿಂದ ಅಮ್ಮಂದಿರ ಟೆನ್ಷನ್‌ ಸ್ವಲ್ಪ ಜಾಸ್ತಿಯಾಗಿದೆ ಅಲ್ವಾ? ಮೂಗು ಸೋರುವುದು, ಕೆಮ್ಮು, ಜ್ವರ ಈ ಬಗೆಯ ಸಾಮಾನ್ಯ ಸಮಸ್ಯೆ ಈ ಸಮಯದಲ್ಲಿ ಕಂಡು ಬರುವುದು ಜಾಸ್ತಿ, ಈ ಸಮಯದಲ್ಲಿ ನೀವು ನಿಮ್ಮ ಆಹಾರಕ್ರಮಗಳ ತುಂಬಾನೇ ಜಾಗ್ರತೆವಹಿಸಬೇಕು. ಅದರಲ್ಲೂ ನಿಮ್ಮ ಮಕ್ಕಳಿಗೆ ಈ ಬಗೆಯ ಆಹಾರಗಳನ್ನು ಅವರ ಆಹಾರಕ್ರಮದಲ್ಲಿ ಸೇರಿಸಿ, ಇದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು:

1. ಅರಿಶಿಣ

ಮಕ್ಕಳಿಗೆ ನೀಡುವ ಆಹಾರದಲ್ಲಿ ಅರಿಶಿಣ ಸೇರಿಸಿ. ಹಾಲು ನೀಡುವಾಗ ಅದರಲ್ಲಿ ಸ್ವಲ್ಪ ಅರಿಶಿಣ ಹಾಕಿ ಕೊಡಿ. ಬಿಸಿ ನೀರಿಗೆ ಸ್ವಲ್ಪ ಅರಿಶಿಣ ಹಾಕು ಕುಡಿಸಿ. ಇನ್ನು ಅಡುಗೆಯಲ್ಲಿ ಅರಿಶಿಣ ಬಳಸಿ. ತುಂಬಾ ಅರಿಶಿಣ ಹಾಕಿದರೆ ಅದರ ಒಗರು ರುಚಿಯಿಂದ ಮಕ್ಕಳು ಅಡುಗೆ ಇಷ್ಟಪಡಲ್ಲ, ಮಿತಿಯಲ್ಲಿ ಬಳಸಿ.

https://suddimane.com/%e0%b2%b8%e0%b2%bf%e0%b2%8e%e0%b2%82-%e0%b2%af%e0%b3%8b%e0%b2%97%e0%b2%bf-%e0%b2%86%e0%b2%a6%e0%b2%bf%e0%b2%a4%e0%b3%8d%e0%b2%af%e0%b2%a8%e0%b2%be%e0%b2%a5%e0%b3%8d-%e0%b2%85%e0%b2%b5%e0%b2%b0/

2. ಹಾಲಿನ ಉತ್ಪನ್ನಗಳು

ಸ್ಮೂತಿ, ಮಿಲ್ಕ್‌ಶೇಕ್‌, ಯೋಗರ್ಟ್, ಪನ್ನೀರ್ ಇವುಗಳನ್ನು ನೀಡಿ. ಮಳೆಗಾಲದಲ್ಲಿ ಕೂಡ ಮೊಸರು ನೀಡಬಹುದು. ಕೆಲವರು ಕಫ ಆಗುತ್ತೆ ಎಂದು ನೀಡುವುದಿಲ್ಲ. ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಮೊಸರು ನೀಡಿ. ಇದರಿಂದ ಅವರ ಅವರ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ. ಹೆಪಟೈಟಿಸ್, ಅರಿಶಿಣ ಕಾಮಲೆ ಈ ಬಗೆಯ ಕಾಯಿಲೆ ತಡೆಗಟ್ಟಲು ಕೂಡ ಸಹಕಾರಿ.

3. ಅಣಬೆ

ಮಕ್ಕಳಿಗೆ ಮಳೆಗಾಲದಲ್ಲಿ ಅಣಬೆ ಹೆಚ್ಚಾಗಿ ನೀಡಿ. ಅಣಬೆ ಸೂಪ್ ಅದರ ಕರಿ, ಪಲ್ಯ ಅಂತ ಮಾಡಿ ನೀಡಿ. ಇದರಿಂದ ದೇಹಕ್ಕೆ ಅಗ್ಯತವಾಗಿರುವ ಪೋಷಕಾಂಶ ದೊರೆಯುವುದು ಮಾತ್ರವಲ್ಲ ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಬೇಳೆ, ಕಾಟೇಜ್‌ ಚೀಸ್ ಅಂತ ಪ್ರೊಟೀನ್ ಇರುವ ಆಹಾರಗಳನ್ನು ನೀಡಿ.

4. ವಿಟಮಿನ್‌ ಸಿ ಆಹಾರಗಳನ್ನು ನೀಡಿ

ಈ ಸಮಯದಲ್ಲಿ ಮಕ್ಕಳಿಗೆ ಸೀಸನ್ ಹಣ್ಣುಗಳನ್ನು ನೀಡಿ. ಕಿತ್ತಳೆ, ಮಾವಿನಹಣ್ಣು, ಹಲಸಿನ ಹಣ್ಣು ಈ ಬಗೆಯ ಹಣ್ಣುಗಳಲ್ಲಿ ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳಿರುತ್ತದೆ. ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕಾಯಿಲೆ ಬೀಳುವುದನ್ನು ಕಡಿಮೆ ಮಾಡುತ್ತದೆ.

5. ಡ್ರೈ ಫ್ರೂಟ್ಸ್ ನೀಡಿ

ಮಕ್ಕಳ ಸ್ನ್ಯಾಕ್ಸ್ ಬಾಕ್ಸ್‌ಗೆ ಬಿಸ್ಕೆಟ್‌ ಹಾಕಿ ನೀಡಬೇಡಿ, ಅದರ ಬದಲಿಗೆ ಡ್ರೈ ಫ್ರೂಟ್ಸ್ ಹಾಕಿ ನೀಡಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದರಲ್ಲಿ ಆರೋಗ್ಯಕರ ಕೊಬ್ಬಿನಂಶ ಇರುವುದರಿಂದ ಮಕ್ಕಳ ದೈಹಿಕ ಆರೋಗ್ಯದ ಜೊತೆಗೆ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ.

6. ಬೆಳ್ಳುಳ್ಳಿ-ಶುಂಠಿ ಮಿಸ್‌ ಮಾಡ್ಬೇಡಿ

ಮಕ್ಕಳಿಗೆ ಅಡುಗೆ ಮಾಡಿ ಕೊಡುವಾಗ, ಸೂಪ್ ಮಾಡಿ ಕೊಡುವಾಗ ಬೆಳ್ಳುಳ್ಳಿ-ಶುಂಠಿ ಮಿಸ್‌ ಮಾಡ್ಬೇಡಿ. ಇವುಗಳನ್ನು ಅವರ ಆಹಾರದಲ್ಲಿ ಸೇರಿಸುವುದರಿಂದ ದೇಹ ಬೆಚ್ಚಗಿರುತ್ತದೆ, ಇದರಿಂದ ಶೀತ, ಕೆಮ್ಮು ಈ ಬಗೆಯ ಕಾಯಿಲೆ ತಡೆಗಟ್ಟಲು ಸಹಕಾರಿ.

7. ಬೀಟ್‌ರೂಟ್‌ ಕೊಡಲು ಮಿಸ್‌ ಮಾಡ್ಬೇಡಿ

ಮಕ್ಕಳಿಗೆ ಮಳೆಗಾಲದ ಆಹಾರದಲ್ಲಿ ಬೀಟ್‌ರೂಟ್‌ ಸೇರಿಸಿ. ಇದರಿಂದ ಕೆಂಪು ರಕ್ತಕಣಗಳು ಹೆಚ್ಚಾಗುವುದು. ಅಲ್ಲದೆ ಮಕ್ಕಳಲ್ಲಿ ರಕ್ತಹೀನತೆ ಹಾಗೂ ಪೋಷಕಾಂಶದ ಕೊರತೆ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.

8. ತೆಳು ಮಾಂಸ ನೀಡಿ

ನೀವು ಮಾಂಸಾಹಾರಿಯಾದರೆ ಮಕ್ಕಳಿಗೆ ತೆಳು ಮಾಂಸ ನೀಡಿ. ಫಾರಂ ಕೋಳಿ ಬದಲಿಗೆ ನಾಟಿ ಕೋಳಿ ನೀಡಿ. ಅಲ್ಲದೆ ಮಕ್ಕಳಿಗೆ ತೆಳು ಮಾಂಸದಿಂದ ಸೂಪ್‌ ಮಾಡಿ ಕೊಡಿ, ಇದರಿಂದ ಅವರಿಗೆ ಪ್ರೊಟೀನ್ ಸಿಗುತ್ತದೆ.

9. ದೇಸಿ ತುಪ್ಪ ಬಳಸಿ

ಮಕ್ಕಳ ಆಹಾರದಲ್ಲಿ ದೇಸಿ ತುಪ್ಪ ಬಳಸಿ. ಆರೋಗ್ಯಕರ ಕೊಬ್ಬಿನಂಶ ಮಕ್ಕಳ ತ್ವಚೆ, ಕೂದಲಿಗೆ, ಬುದ್ಧಿಶಕ್ತಿಗೆ, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕಲಬೆರಿಕೆ ತುಪ್ಪ ನೀಡಬೇಡಿ, ನೀವು ಶುದ್ಧ ತುಪ್ಪವನ್ನೇ ನೀಡಿ.

10. ಮೀನು

ಮಕ್ಕಳಿಗೆ ನೀವು ಮೀನು ಕೊಡಬಹುದು. ಆದರೆ ನೀಡುವ ಮುನ್ನ ಮುಳ್ಳಿನ ಬಗ್ಗೆ ಮಾತ್ರ ಜಾಗ್ರತೆವಹಿಸಿ, ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. ನೀವು ನಿಮ್ಮ ಮಕ್ಕಳ ಆಹಾರಕ್ರಮದ ಕಡೆಗೆ ಎಷ್ಟು ಗಮನ ಕೊಡುತ್ತೀರೋ ಅವರು ಕಾಯಿಲೆ ಬೀಳುವುದು ಕೂಡ ಕಡಿಮೆಯಾಗುವುದು. ಚಾಕ್ಲೆಟ್, ಜಂಕ್‌ಫುಡ್ಸ್ ನೀಡಬೇಡಿ, ಇಂಥ ಆಹಾರಗಳು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತೆ. ಅವರಿಗೆ ಆರೋಗ್ಯಕರವಾದ ಆಹಾರ ನೀಡಿ, ಆರೋಗ್ಯಕರವಾಗಿ ಬೆಳೆಯುತ್ತಾರೆ.