Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಹಿಳಾ ಸಬಲೀಕರಣ ಘಟಕದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

 ದಾವಣಗೆರೆ; ಕೇಂದ್ರ ಪುರಸ್ಕøತ ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ  ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.  ಜಿಲ್ಲಾ ಮಿಷನ್ ಸಂಯೋಜಕರ ಒಂದು ಹುದ್ದೆಗೆ  ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಠಿಕತೆ, ಔಷಧ, ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆಯಲ್ಲಿ ಪದವಿ ಪಡೆದಿದ್ದು. ಸಂಬಂಧಿತ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗಳಲ್ಲಿ 3 ವರ್ಷ ಅನುಭವ ಹೊಂದಿರಬೇಕು.

ಹಣಕಾಸು ಸಾಕ್ಷರತೆ ಮತ್ತು ಅಕೌಂಟೆಂಟ್ ತಜ್ಞರ ಒಂದು ಹುದ್ದೆಗೆ  ಅರ್ಥಶಾಸ್ತ್ರ, ಬ್ಯಾಂಕಿಂಗ್, ಇತರೆ ವಿಭಾಗದಲ್ಲಿ ಪದವಿ ಪಡೆದಿದ್ದು. ಸರ್ಕಾರೇತರ ಸಂಸ್ಥೆಗಳೊಂದಿಗೆ 3 ವರ್ಷ ಅನುಭವ ಹೊಂದಿರಬೇಕು.

ಅರ್ಹರು ಕಚೇರಿಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುವೆಂಪು ನಗರ, 14 ನೇ ಮುಖ್ಯ ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ. ಇಲ್ಲಿಗೆ ಖುದ್ದು ಅಥವಾ ಅಂಚೆ ಮೂಲಕ  ಫೆ. 22 ರೊಳಗಾಗಿ ಸಲ್ಲಿಸಲು ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.