Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಹಿಳೆಗೆ ಕಚ್ಚಿದ ನಟ ದರ್ಶನ ಮನೆಯ ನಾಯಿಗಳು – ನಟ ಸೇರಿದಂತೆ ಇಬ್ಬರ ಮೇಲೆ ಎಫ್ಐಆರ್

ಬೆಂಗಳೂರು : ಸ್ಯಾಂಡಲ್ ವುಡ್ ನಟರಿಗೆ ಸದ್ಯ ಗ್ರಹಗತಿಗಳು ಸರಿ ಇಲ್ಲ ಅಂತ ಕಾಣಿಸುತ್ತದೆ. ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಸೆಲೆಬ್ರೆಟಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು, ಇದೀಗ ನಟರೊಬ್ಬರ ಮನೆಯ ನಾಯಿ ಕಚ್ಚಿದ್ದಕ್ಕೆ ನಟನ ಮೇಲೆ ಮಹಿಳೆ ದೂರು ದಾಖಲಿಸಿದ್ದಾರೆ.

ಆರ್‌.ಆರ್‌.ನಗರದ ಬಿಇಎಂಎಲ್ 5ನೇ ಹಂತದ ನಿವಾಸಿ, ವಕೀಲೆ ಅಮಿತಾ ಜಿಂದಾಲ್‌ ಎಂಬುವರು ದೂರು ನೀಡಿದ್ದಾರೆ. ಅಕ್ಬೋಬರ್ 28ರಂದು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ಎಫ್‌ಐಆರ್ ದಾಖಲಾಗಿದೆ. ಸ್ಪರ್ಶ ಆಸ್ಪತ್ರೆಗೆ ಕಾರ್ಯಕ್ರಮವೊಂದಕ್ಕೆ 28ರಂದು ತೆರಳಿದ್ದೆ. ಕಾರನ್ನು ದರ್ಶನ್‌ ಮನೆ ಪಕ್ಕದಲ್ಲಿದ್ದ ಖಾಲಿ ಪ್ರದೇಶದ ಎದುರಿನ ರಸ್ತೆಯಲ್ಲಿ ನಿಲುಗಡೆ ಮಾಡಿದ್ದೆ. ಕಾರ್ಯಕ್ರಮ ಮುಗಿಸಿ ವಾಪಸ್‌ ಬಂದಾಗ ನಾಯಿಗಳು ದಾಳಿ ನಡೆಸಿದವು’ ಎಂದು ತಿಳಿಸಿದ್ದಾರೆ.

ಎರಡು ನಾಯಿಗಳನ್ನು ಕಟ್ಟಿದ್ದು, ಒಂದನ್ನು ಹಾಗೆಯೇ ಬಿಡಲಾಗಿತ್ತು. ಕಾರು ತೆಗೆದುಕೊಳ್ಳಬೇಕಿದ್ದು, ನಾಯಿಗಳನ್ನು ಬೇರೆಡೆ ಒಯ್ಯಲು ಕಾವಲುಗಾರನಲ್ಲಿ ಮನವಿ ಮಾಡಿದೆ. ಆದರೆ, ಆತ ಕಾರು ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆಸಿದ. ಅದೇ ಸಂದರ್ಭದಲ್ಲಿ ನಾಯಿಗಳು ದಾಳಿ ನಡೆಸಿದವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ಬಟ್ಟೆ ಹರಿದುಹಾಕಿವೆ’ ಎಂದು ತಿಳಿಸಿದ್ದಾರೆ. ‘ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಎಚ್ಚರಿಕೆ ವಹಿಸಿರಲಿಲ್ಲ. ಮನೆ, ಶ್ವಾನಗಳ ಮಾಲೀಕರು, ಶ್ವಾನ ನೋಡಿಕೊಳ್ಳುತ್ತಿದ್ದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.