ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!
ಹಾಲು ಆರೋಗ್ಯಕ್ಕೆ ಉತ್ತಮ ಅಂತಾ ಹೊತ್ತಲ್ಲದ ಹೊತ್ತಲ್ಲಿ ಕುಡಿದ್ರೆ ಸಮಸ್ಯೆ ಆಗೋದು ಗ್ಯಾರಂಟಿ. ಕೆಲವರಿಗೆ ಮಾಂಸಹಾರ ಊಟ ಮಾಡಿದ ಕೂಡಲೇ ಹಾಲು ಕುಡಿಯುವ ಅಭ್ಯಾಸದಿಂದ ಹಲವು ಸಮಸ್ಯೆಗಳಿವೆ.
ಪ್ರತಿನಿತ್ಯ ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಹೀಗಂತ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಹಾಲು (Milk) ಆರೋಗ್ಯಕ್ಕೆ( Health) ಉತ್ತಮ ಅಂತಾ ಹೊತ್ತಲ್ಲದ ಹೊತ್ತಲ್ಲಿ ಕುಡಿದ್ರೆ ಸಮಸ್ಯೆ ಆಗೋದು ಗ್ಯಾರಂಟಿ. ಕೆಲವರಿಗೆ ಮಾಂಸಹಾರ ಊಟ ಮಾಡಿದ ಕೂಡಲೇ ಹಾಲು ಕುಡಿಯುವ ( Drink Milk After Non-Veg ) ಅಭ್ಯಾಸದಿಂದ ಹಲವು ಸಮಸ್ಯೆಗಳಿವೆ.
ಆರೋಗ್ಯವನ್ನು ಕಾಪಾಡಿಕೊಳ್ಳಲು ಮಕ್ಕಳಿಂದ ಹಿಡಿದು, ವಯೋವೃದ್ದರ ವರೆಗೂ ಹಾಲು ಕುಡಿಯುತ್ತಾರೆ. ಹಾಲಿನಲ್ಲಿರುವ ಪೌಷ್ಠಿಕಾಂಶವನ್ನು ಯಾವುದೇ ಆಹಾರಕ್ಕೂ ಕೂಡ ಹೋಲಿಕೆ ಮಾಡಲು ಸಾಧ್ಯವಿಲ್ಲ. ರಾತ್ರಿ ಮಲಗುವಾಗ ಹಾಲು ಕುಡಿಯುವುದು ಉತ್ತಮ ಅಭ್ಯಾಸ. ಇನ್ನೂ ಕೆಲವರು ಬೆಳಗ್ಗೆ ಎದ್ದ ಕೂಡಲೇ ಹಾಲು ಕುಡಿಯುತ್ತಾರೆ.
ಹಾಲು ಕುಡಿಯುವ ಅಭ್ಯಾಸದಿಂದ ಅನೇಕ ಅನಾರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ. ಹಾಲನ್ನು ಅಮೃತ ಎಂದು ಕರೆಯುವವರು ಇದ್ದಾರೆ. ಭಾರತ ದೇಶದಲ್ಲಿ ಹಾಲನ್ನು ಕುಡಿಯದವರ ಸಂಖ್ಯೆ ತೀರಾ ಕಡಿಮೆ. ಮಟನ್ ಮತ್ತು ಚಿಕನ್ ನಂತಹ ಮಾಂಸಾಹಾರಿ ಆಹಾರವನ್ನು ಸೇವಿಸಿದ ನಂತರ ಹಾಲು ಕುಡಿಯಬಹುದೇ ಅಥವಾ ಕುಡಿಯಬಹುದೇ ಎಂದು ಅನೇಕರಿಗೆ ತಿಳಿದಿಲ್ಲ.
ಆದರೆ ಹಾಲನ್ನು ಕುಡಿದ 2 ರಿಂದ 3 ಗಂಟೆಗಳ ಒಳಗೆ ಮೀನು, ಕೋಳಿ ಮಾಂಸದ ಖಾದ್ಯಗನ್ನು ತಿನ್ನ ಬಾರದು. ಒಂದೊಮ್ಮೆ ಹೀಗೆ ಮಾಡಿದ್ರೆ ನಿಮಗೆ ಅಜೀರ್ಣ ಅಥವಾ ಹೊಟ್ಟೆನೋವಿನ ಸಮಸ್ಯೆ ಉಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಚಿಕನ್‌ನಿಂದ ಸಿದ್ದಪಡಿಸುವ ಕೆಲವೊಂದು ಆಹಾರಗಳು ಆರೋಗ್ಯಕ್ಕೆ ಹಾನಿಕಾಕರವಂತೆ. ಜೀರ್ಣಕ್ರಿಯೆಯ ಸಮಸ್ಯೆಯನ್ನು ತಂದೊಡ್ಡಲಿದೆಯಂತೆ. ಹಾಲನ್ನು ಕುಡಿಯುವ ಮೊದಲು ಯಾವುದೇ ಉಪ್ಪು ಬಳಕೆ ಮಾಡಿ ಸಿದ್ದಪಡಿಸಿರುವ ಆಹಾರವನ್ನು ತಿನ್ನಲೇ ಬಾರದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅಷ್ಟೇ ಯಾಕೆ ಆಯುರ್ವೇದ ಶಾಸ್ತ್ರದಲ್ಲಿಯೂ ಇದನ್ನು ಇಪ್ಪಲಾಗಿದೆ.
ಹಾಲಿನ ಜೊತೆಗೆ ಮಾಂಸಹಾರ ಸೇವನೆಯನ್ನು ಆಯುರ್ವೇದ ಶಾಸ್ತ್ರದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಲು ಹಾಗೂ ಮಾಂಸಹಾರದಿಂದ ಉಂಟಾಗು ಅಜೀರ್ಣ ಕ್ರಿಯೆಯಿಂದ ಚರ್ಮ ಸಮಸ್ಯೆಗಳು ಬರಬಹುದು ಎನ್ನಲಾಗುತ್ತಿದೆ. ಆದರೆ ಮಾಂಸಹಾರ ಸೇವನೆ ಮಾಡಿದ ಮೇಲೆ ಹಾಲನ್ನೇ ಕುಡಿಯ ಬಾರದು ಎಂದು ನಾವು ಹೇಳುತ್ತಿಲ್ಲ.
ಹಾಲು ಕುಡಿದ ಎರಡರಿಂದ ಮೂರು ಗಂಟೆಗಳ ಅವಧಿಯಲ್ಲಿ ಮೀನು, ಮಾಂಸಗಳನ್ನು ತಿನ್ನ ಬಾರದು. ಒಂದೊಮ್ಮೆ ಕೋಳಿ ಮಾಂಸದ ಖಾದ್ಯ, ಮೀನಿನ ಖಾದ್ಯ, ಮಟನ್ ಖಾದ್ಯಗಳನ್ನು ತಿಂದ ನಂತರದಲ್ಲಿ ಹಾಲವನ್ನು ಕುಡಿಯ ಬಾರದು.
ಅಷ್ಟಕ್ಕೂ ನಾನ್‌ವೆಜ್ ಜೊತೆಗೆ ಹಾಲನ್ನು ಕುಡಿಯ ಬಾರದು ಅನ್ನೋದಕ್ಕೆ ಹಲವು ವೈಜ್ಞಾನಿಕ ಕಾರಣಗಳಿಗೆ. ಹಾಲಿನಲ್ಲಿ ಖನಿಜ, ಪ್ರೋಟಿನ್ ಸೇರಿದಂತೆ ವಿವಿಧ ಪೋಷಕಾಂಶಗಳಿವೆ. ಹೀಗಾಗಿ ಚಿಕ್ ಜೊತೆಯಲ್ಲಿ ಹಾಲು ಕುಡಿಯ ಬಾರದು. ಹಾಲು ಮತ್ತು ಮಾಂಸಹಾರದಲ್ಲಿ ಪ್ಯಾಸೀನ್ ಮತ್ತು ಪ್ರೋಟಿನ್ ಅಂಶ ಒಳಗೊಂಡಿದೆ.
ಹೀಗಾಗಿ ಮಾಂಸಹಾರದ ಜೊತೆಗೆ ಹಾಲು ಸೇವನೆ ಸಮಸ್ಯೆಯನ್ನು ತಂದೊಡ್ಡಲಿದೆ. ಅದ್ರಲ್ಲೂ ಚಿಕನ್ ತಿಂದು ಹಾಲು ಕುಡಿಯುವ ದುಸ್ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಮಾಂಸಹಾರ ಸೇವನೆಯಿಂದಲೂ ಅತೀ ಹೆಚ್ಚಿನ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ ಅನ್ನೋದನ್ನು ಮರೆಯಬೇಡಿ.