Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಾಜಿ ಸೈನಿಕ ಯುವಕನಿಂದ ಟಿಬೆಟಿಯನ್ ಯುವಕನ ಹತ್ಯೆ

ಕಾರವಾರ: ಟಿಬೆಟಿಯನ್ ಕ್ಯಾಂಪ್ ನಂ.4ರಲ್ಲಿ ಇಬ್ಬರು ಗೆಳೆಯರ ನಡುವೆ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ.

ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ (35) ಕೊಲೆಯಾದ ಯುವಕ.

ಗೊನಪೊ ತಿನ್ಲೆ ಚೊಡೆಕ್(50) ಕೊಲೆಮಾಡಿದ ವ್ಯಕ್ತಿಯಾಗಿದ್ದು, ಈತ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತನಾದವನಾಗಿದ್ದಾನೆ ಎನ್ನಲಾಗಿದೆ.

ಇಬ್ಬರ ನಡುವೆ ಜಗಳ ನಡೆದು ಚಾಕುವಿನಿಂದ ಇಬ್ಬರೂ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಜಮಯಾಂಗ್ ಡಾಕ್ಪಾ ಯಾನೆ ಲೋಬ್ಸಂಗ್ ಚಾಕು ಇರಿತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.